ಕಾಂಗ್ರೆಸ್ ನ ಫ್ಯೂಸ್ ಕಿತ್ತಾಕ್ಬಿಟ್ಟಿದ್ದೀವಿ ಹೇಗೆ ಶಾಕ್ ನೀಡ್ತಾರೆ ನೋಡೋಣ: ಕುಮಾರಸ್ವಾಮಿ ಡೈಲಾಗ್ ವೈರಲ್ - Mahanayaka
10:03 PM Wednesday 4 - December 2024

ಕಾಂಗ್ರೆಸ್ ನ ಫ್ಯೂಸ್ ಕಿತ್ತಾಕ್ಬಿಟ್ಟಿದ್ದೀವಿ ಹೇಗೆ ಶಾಕ್ ನೀಡ್ತಾರೆ ನೋಡೋಣ: ಕುಮಾರಸ್ವಾಮಿ ಡೈಲಾಗ್ ವೈರಲ್

kumara swamy
24/08/2021

ತುಮಕೂರು: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ “ನಿಖಿಲ್ ಎಲ್ಲಿದ್ಯಪ್ಪಾ…” ಎಂಬ ಕುಮಾರಸ್ವಾಮಿ ಅವರ ಡೈಲಾಗ್ ವೈರಲ್ ಆಗಿತ್ತು. ಇದೀಗ “ಕಾಂಗ್ರೆಸ್ ನ ಫ್ಯೂಸ್ ಕಿತ್ತಾಕ್ಬಿಟ್ಟಿದ್ದೀವಿ” ಎಂಬ ಡೈಲಾಗ್ ವೈರಲ್ ಆಗಿದೆ. ಮಾಧ್ಯಮಗಳ ಜೊತೆಗೆ ಮಾತಿಗೆ ನಿಂತ ಕುಮಾರಸ್ವಾಮಿ ಪಂಚಿಂಗ್ ಡೈಲಾಗ್ ಹೊಡೆದರು.

ಹಾಸನದಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ತುರುವೇಕೆರೆ ಜೆಡಿಎಸ್ ಮುಖಂಡರ ಮನೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭೇಟಿ ನೀಡಿದ್ದರು. ಈ ವೇಳೆ ಕುಮಾರಸ್ವಾಮಿ ಮಾಧ್ಯಮಗಳ ಜೊತೆಗೆ ಮಾತನಾಡಿದರು.

ಜೆಡಿಎಸ್ ನಾಯಕರನ್ನು ಸೆಳೆಯುವ ಮೂಲಕ ಕಾಂಗ್ರೆಸ್ ಶಾಕ್ ನೀಡಲಿದೆಯೇ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,  ಜೆಡಿಎಸ್ ನಾಯಕರನ್ನು ಕಾಂಗ್ರೆಸ್ ಸೆಳೆಯುತ್ತಿದೆ ಎನ್ನುವುದು ಸುಳ್ಳು ಸುದ್ದಿ, ನಾವು ಕರೆಂಟ್ ಹರಿಯಲು ಬಿಟ್ಟಿಲ್ಲ. ಕಾಂಗ್ರೆಸ್ ನ ಫ್ಯೂಸ್ ಕಿತ್ತು ಬಿಟ್ಟಿದ್ದೇವೆ. ಅವರು ನಮಗೆ ಹೇಗೆ ಶಾಕ್ ಕೊಡುತ್ತಾರೆ? ಎಂದು ಮರು ಪ್ರಶ್ನಿಸಿದರು.  ಈ ಹೇಳೀಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನೂ ಜನಾಶೀರ್ವಾದ ಯಾತ್ರೆಯನ್ನು ನಿನ್ನೆ ವಿರೋಧಿಸಿ ಹೇಳಿಕೆ ನೀಡಿದ್ದ ಕುಮಾರಸ್ವಾಮಿ ಜನಾಶೀರ್ವಾದ ಯಾತ್ರೆಯಲ್ಲಿ ಯಾವುದೇ ಸಂದೇಶವಿಲ್ಲ.  ಹಾರ ತುರಾಯಿ ಹಾಕಿಸಿಕೊಂಡು ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಾರೆ. ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಕಾಂಗ್ರೆಸ್ ನಾಯಕರು ಕೂಡ ಕೊವಿಡ್ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಇನ್ನಷ್ಟು ಸುದ್ದಿಗಳು…

 

ಸಿಎಂ ಭೇಟಿಗೆ ದೇವಸ್ಥಾನದಿಂದಲೇ ಬಂದ ದೇವಿ | ಕೊನೆಗೆ ನಡೆದದ್ದೇನು ಗೊತ್ತಾ?

ಶಾಕಿಂಗ್ ನ್ಯೂಸ್: ಮಗುವಿಗೆ ಜನ್ಮ ನೀಡಿದ 12 ವರ್ಷ ವಯಸ್ಸಿನ ಬಾಲಕಿ

ಕ್ರಿಮಿನಲ್ ಹಿನ್ನೆಲೆಯ ಜನಪ್ರತಿನಿಧಿಗಳಿಗೆ ಬಿಗ್ ಶಾಕ್ | 6 ವರ್ಷಗಳ ಕಾಲ ಅನರ್ಹರಾಗುವ ಸಾಧ್ಯತೆ

ಆಟೋ ಚಾಲಕನಿಗೆ ಪೊಲೀಸರ ಎದುರೇ ಚಪ್ಪಲಿಯಿಂದ ಹೊಡೆದ ಮಹಿಳೆ | ಆಟೋ ಚಾಲಕ ಮಾಡಿದ್ದೇನು ಗೊತ್ತಾ?

ಫುಡ್ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ: ಇಬ್ಬರು ಕಾರ್ಮಿಕರು ಸಜೀವ ದಹನ

ಅಫ್ಘಾನಿಸ್ತಾನ ಮತ್ತೆ ಭಯೋತ್ಪಾದನೆಯ ಕೇಂದ್ರಬಿಂದು ಆಗದಿರಲಿ: ಸಿಂಗಪುರ ಪ್ರಧಾನಿ

ಕಳ್ಳ ನುಂಗಿದ ಚಿನ್ನದ ಸರವನ್ನು ಹೊರ ತೆಗೆದದ್ದು ಹೇಗೆ ಗೊತ್ತಾ? | ಕೊನೆಗೂ ಕಳ್ಳನ ಪ್ಲಾನ್ ಪ್ಲಾಪ್ ಆಯಿತು!

 

ಇತ್ತೀಚಿನ ಸುದ್ದಿ