ಸಂಸದರನ್ನು ಹುಡುಕಿ ಕೊಟ್ಟವರಿಗೆ ಮೋದಿಯ 15 ಲಕ್ಷ ಹಣದಿಂದ ಬಹುಮಾನ ಘೋಷಣೆ ಹೇಳಿಕೆಗೆ ಬಿಜೆಪಿ ಎಸ್ ಸಿ ಮೋರ್ಚಾ ಖಂಡನೆ - Mahanayaka
8:06 AM Friday 20 - September 2024

ಸಂಸದರನ್ನು ಹುಡುಕಿ ಕೊಟ್ಟವರಿಗೆ ಮೋದಿಯ 15 ಲಕ್ಷ ಹಣದಿಂದ ಬಹುಮಾನ ಘೋಷಣೆ ಹೇಳಿಕೆಗೆ ಬಿಜೆಪಿ ಎಸ್ ಸಿ ಮೋರ್ಚಾ ಖಂಡನೆ

manjunath chalavadi
31/05/2021

ಮುದ್ದೇಬಿಹಾಳ್:  ವಿಜಯಪುರ ಲೋಕಸಭಾ ಸದಸ್ಯರು ಕಾಣೆಯಾಗಿದ್ದಾರೆ ಹುಡುಕಿ ಕೊಟ್ಟವರಿಗೆ 15 ಲಕ್ಷ ಬಹುಮಾನ ಮೋದಿ ನಮ್ಮ ಖಾತೆಗೆ ಹಾಕಿದ ನಂತರ ಕೊಡಲಾಗುವುದು ಎಂದು ಪ್ರಕಟಣೆ ನೀಡಿರುವ ಕಾಂಗ್ರೆಸ್ ಮುಖಂಡ ಸದ್ದಾಮ ಕುಂಟೋಜಿ ಹೇಳಿಕೆಯನ್ನು ಭಾರತೀಯ ಜನತಾ ಪಾರ್ಟಿ ಎಸ್ ಸಿ ಮೋರ್ಚಾ ತೀವ್ರವಾಗಿ ಖಂಡಿಸುತ್ತಿದೆ ಎಂದು ಎಸ್ ಸಿ ಮೋರ್ಚಾ ತಾಲೂಕ ಅಧ್ಯಕ್ಷ ಮಂಜುನಾಥ್ ಛಲವಾದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ಮಾನ್ಯ ಸಂಸದರು ಅನಾರೋಗ್ಯಕ್ಕೆ ಇದಾಗಿದ್ದು ಮನೆಯಲ್ಲೇ ಇರಲು ವೈದ್ಯರು ಸೂಚಿಸಿದ್ದಾರೆ. ಕಾರಣ ಮನೆಯಲ್ಲೇ ಇದ್ದು ತಮ್ಮ ಆಪ್ತ ಸಹಾಯಕ ಹಾಗೂ ಜೇಷ್ಠ ಪುತ್ರನ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ನಿನನಿತ್ಯ ಜಿಲ್ಲಾ ಅಧಿಕಾರಿಗಳ ಸಭೆ ಕರೆದು ಕೋವಿಡ್ ವಿರುದ್ದ ಹೊರಡಲು ಏನು ಮಾಡಬೇಕು ಎಂದು ಚರ್ಚಿಸಿ ಸೂಕ್ತ ಸಲಹೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಇಂತಹ ಪರಿಸ್ಥಿತಿಯಲ್ಲಿ ಸದ್ದಾಂ ಕುಂಟೋಜಿ ರಾಜಕೀಯ ಮಾಡುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮಾನ್ಯ ಸಂಸದರ ರಾಜಕೀಯ ಅನುಭವದಷ್ಟು ವಯಸ್ಸು ಆಗದವರು ಅವರ ವ್ಯಕ್ತಿತ್ವ ತೇಜೋವಧೆ ಮಾಡಲು ಹೊರಟಿದ್ದಾರೆ.  ಕಳೆದ ಇಪ್ಪತ್ತು ವರ್ಷದಲ್ಲಿ ಮಾನ್ಯ ಸಂಸದರು ಜಿಲ್ಲೆಗೆ ಏನು ಮಾಡಿದ್ದಾರೆ ಎಂಬುದು ಜಿಲ್ಲೆಯ ಜನತೆಗೆ ಗೊತ್ತಿದೆ.  ಬೇರೊಬ್ಬರ ಕಡೆ ಬೆರಳು ಮಾಡುವ ಕಾಂಗ್ರೆಸ್ ನವರು ಮುದ್ದೇಬಿಹಾಳ್ ತಾಲೂಕಿನಲ್ಲಿ ಏನು ಮಾಡಿದ್ದಾರೆ?  covid ಸಮಯದಲ್ಲಿ ಬಡವರಿಗೆ ಇವರಿಂದ ಏನು ಸಹಾಯ ಆಗಿದೆ ಎಂದು ಪ್ರಶ್ನಿಸಿದರು


Provided by

ಇತ್ತೀಚಿನ ಸುದ್ದಿ