ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆಯನ್ನು ತಾನೇ ಧ್ವಂಸಪಡಿಸಿಕೊಳ್ಳುತ್ತಿದೆ: ಪ್ರಕಾಶ್ ಕಾರಟ್ - Mahanayaka

ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆಯನ್ನು ತಾನೇ ಧ್ವಂಸಪಡಿಸಿಕೊಳ್ಳುತ್ತಿದೆ: ಪ್ರಕಾಶ್ ಕಾರಟ್

cpm
09/04/2022

ಕಣ್ಣೂರು: ನಾವು ನಮ್ಮ ಜಾತಿ-ಮತಗಳ ಬೇಧಭಾವವಿಲ್ಲದೆ ಭಾರತೀಯರಾಗಿದ್ದೇವೆ. ಆದರೆ ಆರೆಸ್ಸೆಸ್ ನಡೆಸುತ್ತಿರುವ ಮತ್ತು ನಿಯಂತ್ರಿಸುತ್ತಿರುವ ಪ್ರಸಕ್ತ ಆಳುವ ಪಕ್ಷ ಬಿಜೆಪಿ ನಮ್ಮ ದೇಶದ ಜಾತ್ಯತೀತ ಚಾರಿತ್ರ್ಯವನ್ನು ಧ್ವಂಸ ಮಾಡಲು ಪ್ರಯತ್ನಿಸುತ್ತಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ಬ್ಯುರೊ ಸದಸ್ಯ ಪ್ರಕಾಶ ಕಾರಟ್ ಹೇಳಿದ್ದಾರೆ.


Provided by

ದೇಶ ಮತ್ತು ಜನತೆ ಎದುರಿಸುತ್ತಿರುವ ಮೂಲಭೂತ ಸವಾಲು, ಜಾತ್ಯತೀತತೆಗೆ ಸವಾಲುಗಳು ಎಂಬ ವಿಚಾರದಲ್ಲಿ ಕಣ್ಣೂರಿನಲ್ಲಿ ನಡೆದ  ಮಹಾಧಿವೇಶನದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ ಮತ್ತು ಸಂಸತ್ ಸದಸ್ಯ ಶಶಿ ತರೂರ್ ಅವರನ್ನೂ ಆಹ್ವಾನಿಸಲಾಗಿತ್ತು, ಮತ್ತು ಅವರು ಭಾಗವಹಿಸಲು ಒಪ್ಪಿದ್ದರು. ಆದರೆ ಕಾಂಗ್ರೆಸ್ ಮುಖಂಡತ್ವ ಅವರು ಭಾಗವಹಿಸಬಾರದು ಎಂದು ನಿಷೇಧಿಸಿತು ಎಂದರು.

“ಜಾತ್ಯತೀತ ಪ್ರಜಾಪ್ರಭುತ್ವ ಮನಸ್ಸಿನ ಪ್ರತಿಯೊಬ್ಬರೂ ಈ ವಿಷಯದ ಬಗ್ಗೆ ಚರ್ಚೆ ಅಗತ್ಯ ಎಂದು ಒಪ್ಪುತ್ತಾರೆ. ಈ ವಿಷಯದಲ್ಲಿ ಶಶಿ ತರೂರ್ ಅವರ ಹೇಳಿಕೆಯನ್ನು ನೋಡಿದ್ದೇನೆ. ಇದೊಂದು ಮಹತ್ವದ ವಿಚಾರ ಸಂಕಿರಣ, ನಾನು ಇದರಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ ಎಂದು ಅವರು ಬರೆದಿದ್ದರು. ಆದರೆ ಕೇರಳದಲ್ಲಿ ಅವರ ಪಕ್ಷದ ಮುಖಂಡತ್ವ ಮತ್ತು ಎಐಸಿಸಿ ಮುಖಂಡತ್ವ ಅವರಿಗೆ ಭಾಗವಹಿಸಬಾರದೆಂದು ಹೇಳಿದೆ. ಆದ್ದರಿಂದ ಅವರು ಗೈರುಹಾಜರಾಗಿದ್ದಾರೆ” ಎಂದು ಈ ಕುರಿತು ಟಿಪ್ಪಣಿ ಮಾಡುತ್ತ ಹೇಳಿದ ಪ್ರಕಾಶ್ ಕಾರಟ್, ಕಾಂಗ್ರೆಸ್ ಮುಖಂಡರ ಇಂತಹ ನಿಲುವುಗಳು, ಜನರ ನಡುವೆ ಕಾಂಗ್ರೆಸ್ ನ ವಿಶ್ವಾಸಾರ್ಹತೆಯನ್ನು ಧ್ವಂಸ ಮಾಡುತ್ತವೆ ಎಂದರು.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹತ್ತು ಆಂಡ್ರಾಯ್ಡ್ ಅಪ್ಲಿಕೇಶನ್‌ ಗಳನ್ನು ನಿಷೇಧ ಮಾಡಿದ  ಗೂಗಲ್

ಸುಂದರ ಹುಡುಗಿಯನ್ನು ಮಗ ಬಳಸಿಕೊಳ್ಳದಿದ್ದರೆ ತಂದೆ-ತಾಯಿ ಹೊಣೆಯೇ?: ಈಶ್ವರಪ್ಪ ವಿವಾದಿತ ಹೇಳಿಕೆ

ಎಲ್ಲರೂ ಹಿಂದಿಯಲ್ಲಿ ಮಾತನಾಡಬೇಕೆಂದ ಅಮಿತ್ ಶಾ!

ಅರಣ್ಯಾಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಕೇಸು  | ಸೇಡಿಗಾಗಿ ದಲಿತ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗವೇ?

ಶಾರೂಖ್ ಖಾನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿರುವ ನಯನತಾರಾ

ಇತ್ತೀಚಿನ ಸುದ್ದಿ