ಕಾಂಗ್ರೆಸ್ ತನ್ನ ಹಿಂದೂ ವಿರೋಧಿ ನೀತಿಯನ್ನ ಪ್ರಕಟಿಸಿಯೇ ಪ್ರಕಟಿಸುತ್ತೆ: ನಳಿನ್ ಕುಮಾರ್ ಕಟೀಲ್ ಕಿಡಿ - Mahanayaka
12:36 AM Wednesday 5 - February 2025

ಕಾಂಗ್ರೆಸ್ ತನ್ನ ಹಿಂದೂ ವಿರೋಧಿ ನೀತಿಯನ್ನ ಪ್ರಕಟಿಸಿಯೇ ಪ್ರಕಟಿಸುತ್ತೆ: ನಳಿನ್ ಕುಮಾರ್ ಕಟೀಲ್ ಕಿಡಿ

nalin kumar kateel
25/05/2023

ಸಾಂವಿಧಾನಾತ್ಮಕವಾಗಿ ಎಲ್ಲಾ ಇಲಾಖೆಗಳಲ್ಲೂ ಪ್ರತೀ ನಾಗರಿಕನಿಗೂ ಅವನ ಧರ್ಮದ ಅನುಷ್ಠಾನದ ಹಕ್ಕಿದೆ. ಹತ್ತಾರು ವರ್ಷಗಳಿಂದ ಎಲ್ಲಾ ಇಲಾಖೆಗಳಲ್ಲೂ ಧಾರ್ಮಿಕ ಆಧಾರದಲ್ಲಿ ಪೂಜೆಗಳು ನಡೀತಿದೆ. ಆಯುಧ ಪೂಜೆ, ಶಿಲಾನ್ಯಾಸಗಳ ಸಮಯದಲ್ಲಿ ಸಂಪ್ರದಾಯಬದ್ದವಾಗಿ ನಡೆದಿದೆ. ಇವತ್ತು ಇದನ್ನ ತಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡ್ತಾ ಇದೆ. ಈ ಮೂಲಕ ಕಾಂಗ್ರೆಸ್ ನ ಹೀನಾಯ ರಾಜಕಾರಣ ಮತ್ತು ಸಿದ್ದರಾಮಯ್ಯ ಮಾನಸೀಕತೆ ಬಯಲಾಗಿದೆ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.

ಒಬ್ಬ ಮುಖ್ಯಮಂತ್ರಿ ಸಾಂವಿಧಾನಿಕವಾಗಿ ಆತನ ಧಾರ್ಮಿಕ ಆಚರಣೆಗೆ ಅಡ್ಡಿ ಬರೋದು ಸರಿಯಲ್ಲ. ಹಿಂದಿನಿಂದ ನಡೆದುಕೊಂಡು ಬಂದ ಪೂಜೆಗಳನ್ನ ಕೆಲವು ಇಲಾಖೆಗಳಲ್ಲಿ ಮಾಡ್ತಾರೆ. ನಂಬಿಕೆಗಳ ಆಧಾರದಲ್ಲಿ ಕೆಎಸ್ಸಾರ್ಟಿಸಿ, ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಮಾಡ್ತಾರೆ. ಇಂತಹ ಪೂಜೆಗಳನ್ನ‌‌ ನಿಷೇಧಿಸುವ, ಬಹಿಷ್ಕಾರ ಹಾಕುವ ಕ್ರಮ ಸರಿಯಲ್ಲ. ಪೂಜೆ ಮಾಡುವ ಪೊಲೀಸರನ್ನ ಒಂದು ಪಾರ್ಟಿಗೆ ಸೀಮಿತ ಮಾಡುವ ಹೀನ ರಾಜಕಾರಣ ಕಾಂಗ್ರೆಸ್ ನಿಂದ ಆಗ್ತಿದೆ. ನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಬಜರಂಗದಳ ನಿಷೇಧವನ್ನು ಉಲ್ಲೇಖ ಮಾಡ್ತಾ ಇದಾರೆ. ಇದು ಕಾಂಗ್ರೆಸ್ ಹಿಂದೂ ಸಮಾಜದ ಮೇಲೆ ಹೇಗೆ ಸವಾರಿ ಮಾಡುತ್ತೆ ಅನ್ನೋದನ್ನ ತೋರಿಸಿದೆ. ಹಿಂದೂ ಆಚರಣೆ ಹಾಗೂ ರಾಷ್ಟ್ರ ಭಕ್ತ ಕಾರ್ಯಕರ್ತರ ಮೇಲೆ ಹೇಗೆ ಸವಾರಿ ಮಾಡುತ್ತೆ ಅನ್ನದನ್ನು ತೋರಿಸಿದೆ. ಇಂಥದ್ದರ ವಿರುದ್ದ ಹೋರಾಟ ಮಾಡಿ ಉತ್ತರ ಕೊಡೋ ಶಕ್ತಿ ಬಿಜೆಪಿಗಿದೆ. ಸಿದ್ದರಾಮಯ್ಯ ಮತ್ತು‌ ಕಾಂಗ್ರೆಸ್ ನ ಮಾನಸಿಕತೆಯನ್ನ ವಿರೋಧಿಸ್ತೇನೆ. ಸಂಘಟನೆ ಕಾರ್ಯಗಳಿಗೆ ಕೈ ಹಾಕಿದ್ರೆ ನಾವು ಉತ್ತರ ಕೊಡ್ತೇವೆ ಎಂದು ಎಚ್ಚರಿಕೆ ನೀಡಿದರು.

ಎಲ್ಲಾ ಇಲಾಖೆಗಳಲ್ಲೂ ರಾಜಕಾರಣ ಮಾಡುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಅಧಿಕಾರಿಗಳನ್ನ ಕಂಟ್ರೋಲ್ ಮಾಡಿ ಕಾಂಗ್ರೆಸ್ ಅಜೆಂಡಾ ಹೇರುವ ಕೆಲಸ ಮಾಡ್ತಿದೆ. ಹಿಂದಿನ ಎಲ್ಲಾ ಜಿಲ್ಲಾಧಿಕಾರಿಗಳು ಒಳ್ಳೆಯ ಕೆಲಸ ಮಾಡಿ ರಾಜ್ಯ ಅಭಿವೃದ್ಧಿ ಆಗಿದೆ. ಇವತ್ತು ಅಂಥಹ ಅಧಿಕಾರಿಗಳನ್ನು ಬೆದರಿಸುವ ತಂತ್ರಗಾರಿಕೆ ಸಿದ್ದರಾಮಯ್ಯ ಮಾಡ್ತಿದ್ದಾರೆ. ಕಾಂಗ್ರೆಸ್ ತನ್ನ ಹಿಂದೂ ವಿರೋಧಿ ನೀತಿಯನ್ನ ಪ್ರಕಟಿಸಿಯೇ ಪ್ರಕಟಿಸುತ್ತೆ. ನಾವು ಹೋರಾಟದ ಮೂಲಕ ಕಾಂಗ್ರೆಸ್ ಗೆ ಉತ್ತರ ಕೊಡ್ತೇವೆ. ನಾವು ಹಿಂದೂಗಳ ಪರವಾಗಿದ್ದೇವೆ, ಗೋಹತ್ಯೆ ನಿಷೇಧ, ಮತಾಂತರ ನಿಷೇಧದ ಪರವಾಗಿದ್ದೇವೆ. ಹಿಂದೂ ಸಮಾಜಕ್ಕೆ ತೊಂದರೆಯಾದ್ರೆ ಬಿಜೆಪಿ ಹೋರಾಟ ಮಾಡಲಿದೆ ಎಂದರು.

ಕಾಂಗ್ರೆಸ್ ಗೆ ಬಹುಮತ ಕೊಟ್ಟರೂ ಗಲಾಟೆ ಮಾಡ್ತಾ ಇದ್ದಾರೆ. ಇವರು ಸರ್ಕಾರ ಬರುವ ಮೊದಲೇ ಜಗಳ ಮಾಡಿಕೊಂಡು ಬಂದವರು. ಜನಾಶೀರ್ವಾದ ಸಿಕ್ಕರೂ ಇವರ ಬೀದಿ ಜಗಳ ಜೋರಾಗಿದೆ. ಇನ್ನೂ ಮಂತ್ರಿ ಮಂಡಲ ರಚನೆ ಆಗಿಲ್ಲ, ಇದು ರಚನೆ ಆದ್ರೆ ಕಾಂಗ್ರೆಸ್ ನ ಸ್ಥಿತಿ ಏನಾಗುತ್ತೆ ಕಾದು ನೋಡಿ. ನಮ್ಮ 40% ಕಮಿಷನ್ ವಿರುದ್ದ ಇವರು ತನಿಖೆ ಮಾಡಲಿ. ಜೊತೆಗೆ ಸಿದ್ದರಾಮಯ್ಯ ವಿರುದ್ದ ನಾವು ಲೋಕಾಯುಕ್ತಕ್ಕೆ ಕೊಟ್ಟ ದೂರಿನ ತನಿಖೆಯೂ ಆಗಲಿ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ