ಕಾಂಗ್ರೆಸ್ ನವರು ಬೇಕಿದ್ದರೆ ‘ನೆಹರೂ ಹುಕ್ಕಾ ಬಾರ್’ ತೆರೆಯಲಿ: ಸಿ.ಟಿ.ರವಿ ಹೇಳಿಕೆ - Mahanayaka

ಕಾಂಗ್ರೆಸ್ ನವರು ಬೇಕಿದ್ದರೆ ‘ನೆಹರೂ ಹುಕ್ಕಾ ಬಾರ್’ ತೆರೆಯಲಿ: ಸಿ.ಟಿ.ರವಿ ಹೇಳಿಕೆ

hookah bar c t ravi
12/08/2021

ಬೆಂಗಳೂರು: ಕಾಂಗ್ರೆಸ್ ನವರು ಬೇಕಾದರೆ, ನೆಹರೂ ಹೆಸರಿನಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಹುಕ್ಕಾ ಬಾರ್ ತೆರೆಯಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದು, ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ವಿಚಾರ ಮಾತನಾಡುತ್ತಾ ಅವರು ಈ ಹೇಳಿಕೆ ನೀಡಿದರು.

ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಹೆಸರಲ್ಲಿ ಹುಕ್ಕಾ ಬಾರ್ ಬೇಕಿದ್ದರೂ ತೆರೆಯಲಿ. ಇಂದಿರಾ ಕ್ಯಾಂಟೀನ್ ಬೇಕಾದರೂ ಮಾಡಲಿ. ಆದರೆ ಈಗಿರುವ ಇಂದಿರಾ ಕ್ಯಾಂಟಿನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಿಸಬೇಕು ಎಂದು ಸಿ.ಟಿ.ರವಿ ಹೇಳಿದರು.

ಇನ್ನೂ,  ಕೇಂದ್ರ ಸರ್ಕಾರ ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ ಎಂಬುದು ಸಂಸತ್ತಿನಲ್ಲಿ ವಿಪಕ್ಷಗಳ ಅಸಹಕಾರದ ನಡುವೆಯೂ ಸರ್ಕಾರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ 671 ಒಬಿಸಿ ಸಮುದಾಯಗಳು ನ್ಯಾಯಪಡೆಯಲು ಸಾಧ್ಯವಾಗುವಂತೆ ಮಾಡಿರುವುದೇ ಸಾಕ್ಷಿ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ನಮ್ಮ ರಾಜಕೀಯ ವಿರೋಧಿಗಳು ಹಳೆ ಗ್ರಾಮಾಫೋನ್ ತಿರುಗಿಸುತ್ತಿದ್ದಾರೆ. ಅವರಲ್ಲಿ ಪ್ರಮುಖರು ಸಿದ್ದರಾಮಯ್ಯ, ಸಿದ್ದರಾಮಯ್ಯ ತಮ್ಮ ಸಾಫ್ಟ್ ವೇರ‍್ ಅಪ್ ಡೇಟ್ ಮಾಡಿಕೊಳ್ಳಬೇಕು. ನಾವು ಅಂಬೇಡ್ಕರ್ ವಿರೋಧಿಯಲ್ಲ, ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದ್ದು ಕಾಂಗ್ರೆಸ್. ನಾವು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದೇವೆ ಎಂದು  ಕಾಂಗ್ರೆಸ್ ಕುಟುಕಿದರು.

ಇನ್ನಷ್ಟು ಸುದ್ದಿಗಳು…

ಅಧಿಕಾರಕ್ಕೆ ಬಂದ ತಕ್ಷಣವೇ ಜಾತಿಗಣತಿ ವರದಿ ಚರ್ಚೆಗಿಡುತ್ತೇನೆ | ಸಿದ್ದರಾಮಯ್ಯ ಹೇಳಿಕೆ

ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದವರು ಯಾರು? | ತಡ ರಾತ್ರಿ ನಡೆದ್ದದ್ದೇನು?

ಪ್ರೇಮ ನಿವೇದನೆ ತಿರಸ್ಕರಿಸಿದ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದರೆ ಹುಷಾರ್: ಕೇರಳ ಸಿಎಂ ಪಿಣರಾಯಿ ವಿಜಯನ್ ಎಚ್ಚರಿಕೆ

ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ ಪಡೆಯುತ್ತೇವೆ | ದಲಿತ ಸಿಎಂ ಮಾಡ್ತೇವೆ- ಸಚಿವ ಈಶ್ವರಪ್ಪ ಹೇಳಿಕೆ

ಡೊಳ್ಳು ಹೊಟ್ಟೆಯನ್ನು ವ್ಯಾಯಾಮವೇ ಮಾಡದೇ ಕರಗಿಸುವುದು ಹೇಗೆ? | ಇಲ್ಲಿದೆ ಸರಳ ವಿಧಾನ

ಇತ್ತೀಚಿನ ಸುದ್ದಿ