ನಾಮಪತ್ರದಲ್ಲಿ ಸಹಿ ಹಾಕದಿದ್ದರಿಂದ ತಿರಸ್ಕಾರ: ಸೋಮಣ್ಣಗೆ ಬೆಂಬಲ ಘೋಷಿಸಿದ ಪಕ್ಷೇತರ
ಚಾಮರಾಜನಗರ: ನಾಮಪತ್ರ ಸಲ್ಲಿಕೆ ವೇಳೆ ಸಹಿ ಹಾಕದಿದ್ದರಿಂದ ನಾಮಿನೇಷನ್ ತಿರಸ್ಕೃತಗೊಂಡಿದ್ದರಿಂದ ಸೋಮಣ್ಣಗೆ ಇಂದು ಪಕ್ಷೇತರ ಅಭ್ಯರ್ಥಿ ಬೆಂಬಲ ಸೂಚಿಸಿದ್ದಾರೆ.
ಚಾಮರಾಜನಗರ ನಿವಾಸಿ, ಸಾಮಾಜಿಕ ಕಾರ್ಯಕರ್ತ ಮೂರ್ತಿ ಎಂಬವರು ನಾಮಪತ್ರ ಸಲ್ಲಿಕೆ ವೇಳೆ ಸಹಿ ಮಾಡಿರಲಿಲ್ಲವಾದ್ದರಿಂದ ತಿರಸ್ಕೃತಗೊಂಡಿತ್ತು.
ಬಿಜೆಪಿ ಪರ ಈಗ ಮೂರ್ತಿ ಬೆಂಬಲ ಸೂಚಿಸಿ ಸೋಮಣ್ಣ ಪರವಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಚುನಾವಣಾ ಅಧಿಕಾರಿಗಳು ನಾಮಪತ್ರ ಸಲ್ಲಿಕೆ ವೇಳೆ ಎಲ್ಲವೂ ಸರಿಯಿದೆ ಎಂದು ಹೇಳಿದ್ದರು. ಆದರೆ, ಈಗ ಸಹಿ ಮಾಡಿಲ್ಲವೆಂದು ತಿರಸ್ಕೃತ ಮಾಡಿದ್ದಾರೆಂದು ಕಿಡಿಕಾರಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw