ಕೊರೊನಾ 3ನೇ ಅಲೆ ಭೀತಿ:  ಇಂದು ರಾತ್ರಿ 10ರಿಂದ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಜಾರಿ - Mahanayaka
7:59 AM Wednesday 25 - December 2024

ಕೊರೊನಾ 3ನೇ ಅಲೆ ಭೀತಿ:  ಇಂದು ರಾತ್ರಿ 10ರಿಂದ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಜಾರಿ

night curfew in bangalore
03/08/2021

ಬೆಂಗಳೂರು: ಬೆಂಗಳೂರಿನಲ್ಲಿ ಇದೀಗ ಕೊರೊನಾ ಮೂರನೇ ಅಲೆ ಭೀತಿ ಆವರಿಸಿದ್ದು, ಈ ಹಿನ್ನೆಲೆಯಲ್ಲಿ ಮತ್ತೆ ನೈಟ್ ಕರ್ಫ್ಯೂ ಘೋಷಿಸಲಾಗಿದೆ ಎಂದು ವರದಿಯಾಗಿದ್ದು,  ಇಂದು ರಾತ್ರಿ 10 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಯಾಗಲಿದೆ ಎಂದು ತಿಳಿದು ಬಂದಿದೆ.

ರಾತ್ರಿ 10ರ ಬಳಿಕ ಅನಗತ್ಯವಾಗಿ ರಸ್ತೆಗಿಳಿಯುವವರ ಮೇಲೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪಾಲಿಕೆ ಮತ್ತು ಪೊಲೀಸ್ ಇಲಾಖೆ ತಿಳಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕಟ್ಟುನಿಟ್ಟಿನ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.

ಇನ್ನೂ ನಿಯಮ ಮೀರಿ ವರ್ತಿಸುವವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದು, ಕೊವಿಡ್ ಮಾರ್ಗಸೂಚಿ ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ನೈಟ್ ಕರ್ಫ್ಯೂ ವೇಳೆಯಲ್ಲಿ, ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು, ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯುವ ವಾಹನಗಳು, ಪಾಸ್ ಹೊಂದಿರುವ ಕಂಪೆನಿ, ಕೈಗಾರಿಕಾ ಉದ್ಯೋಗಿಗಳಿಗೆ, ಐಡಿ ಕಾರ್ಡ್ ಗಳನ್ನು ಹೊಂದಿರುವ ಟಿಲಿಕಾಂ ಹಾಗೂ ಇಂಟರ್ನೆಟ್ ಸರ್ವೀಸ್ ವರ್ಕರ್ಸ್, ತುರ್ತು ವೈದ್ಯಕೀಯ ಹಾಗೂ ಅಗತ್ಯ ಸರಬರಾಜು ವಾಹನಗಳಿಗೆ ಅವಕಾಶ ನೀಡಲಾಗಿದೆ. ಇನ್ನೂ ವಿಮಾನ, ರೈಲ್ವೆ ಪ್ರಮಾಣ ಸಂಬಂಧಿತ ಓಡಾಟಕ್ಕೆ ಸೂಕ್ತ ಮಾಹಿತಿಯನ್ನು ನೀಡಬೇಕಾಗುತ್ತದೆ.

ಇನ್ನಷ್ಟು ಸುದ್ದಿಗಳು…

ಆ.10ರಂದು ಇಡೀ ದೇಶವೇ ಕಗ್ಗತ್ತಲಲ್ಲಿ ಮುಳುಗಲಿದೆ? | ದೇಶಾದ್ಯಂತ ವಿದ್ಯುತ್ ಸ್ಥಗಿತ!

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ | ಯುವಕ ಅರೆಸ್ಟ್

ಒಂದು ದೇಹದಲ್ಲಿ ಎರಡು ಜೀವ | ಸರ್ಕಾರ ಮತ್ತು ಕಾನೂನಿಗೆ ಸವಾಲಾದ ಸಹೋದರರು

“ಓ ಲಾರ್ಡ್ ಜೀಸಸ್, ಪ್ಲೀಸ್ ಹೆಲ್ಪ್ ಮೀ” ಎಂದು ಎನ್.ಮಹೇಶ್ ಬೇಡುತ್ತಿರುವ ವಿಡಿಯೋ ವೈರಲ್

ಎನ್.ಮಹೇಶ್ ಬಿಜೆಪಿ ಸೇರ್ಪಡೆಗೆ ಡೇಟ್ ಫಿಕ್ಸ್: ಬೆಂಗಳೂರಿನ ಕಚೇರಿಯಲ್ಲಿ ಪಕ್ಷ ಸೇರ್ಪಡೆಗೆ ಎನ್.ಮಹೇಶ್ ಸಿದ್ಧತೆ

ಇತ್ತೀಚಿನ ಸುದ್ದಿ