ಕೊರೊನಾ ಬಾಧಿತರಿಗೆ ಸಹಾಯಹಸ್ತ ಚಾಚಲು ರಾಜ್ಯ ಕಾಂಗ್ರೆಸ್ ಸಜ್ಜು! - Mahanayaka
10:16 AM Thursday 12 - December 2024

ಕೊರೊನಾ ಬಾಧಿತರಿಗೆ ಸಹಾಯಹಸ್ತ ಚಾಚಲು ರಾಜ್ಯ ಕಾಂಗ್ರೆಸ್ ಸಜ್ಜು!

congress
24/04/2021

ಬೆಂಗಳೂರು: ಕೊರೊನಾ ಬಾಧಿತರಿಗೆ ಸಹಾಯಹಸ್ತ ಚಾಚುವಂತೆ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ನಿರ್ದೇಶನ ನೀಡಿದ್ದು, ಈ ಹಿನ್ನೆಲೆಯಲ್ಲಿ ಕೆಪಿಸಿಸಿಯು ಕಾರ್ಯಪ್ರವೃತ್ತವಾಗ್ಇದ್ದು, ಕೊವಿಡ್ ನಿಭಾಯಿಸುವ ನಿಟ್ಟಿನಲ್ಲಿ ವೈದ್ಯಕೀಯ ತಂಡ ರಚನೆಗೆ ಸಿದ್ಧವಾಗಿದೆ.

ಕೋವಿಡ್ ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫ‌ಲ್ಯಗಳ ಬಗ್ಗೆ ಗಮನಹರಿಸುವುದರ ಜತೆಗೆ ಹೊಣೆ ಗಾರಿಕೆ ನಿಭಾಯಿಸುವಂತಹ ಕಾರ್ಯದಲ್ಲಿ ತೊಡಗಬೇಕೆಂದು ಎಐಸಿಸಿ ರಾಜ್ಯ ಘಟಕಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 100 ಮಂದಿ ತಜ್ಞ ವೈದ್ಯರು ಹಾಗೂ 1,000 ಸೇವಾದಳಕಾರ್ಯಕರ್ತರನ್ನೊಳಗೊಂಡ ತಂಡ ರಚಿಸಿ ಟೆಲಿ ಮೆಡಿಸಿನ್‌ ಸೇವೆ ಒದಗಿಸಲು ರೂಪು-ರೇಷೆ ಸಿದ್ಧಪಡಿಸುತ್ತಿದೆ.

ಕೊರೊನಾ ಬಾಧಿತರಿಗೆ ಅವರ ಸುತ್ತಮುತ್ತಲ ಪ್ರದೇಶದಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವ ಹಾಸಿಗೆಗಳ ವಿವರ, ಸಂಪರ್ಕಿಸಬೇಕಾದ ಆರೋಗ್ಯ ಇಲಾಖೆಯ ಸಹಾಯವಾಣಿ ಮೊದಲಾದ ಮಾಹಿತಿಗಳನ್ನು ನೀಡಿರುವುದು.  ಕಡಿಮೆ ಗುಣಲಕ್ಷಣಗಳು ಇರುವವರು ಹೋಂ ಕ್ವಾರಂಟೈನ್‌ನಲ್ಲಿದ್ದರೆ ಅವರಿಗೆ ಟೆಲಿ ಮೆಡಿಸನ್‌ ವ್ಯವಸ್ಥೆ. ಕುಟುಂಬ ವರ್ಗದವರಿಗೆ ಕಾಲ ಕಾಲಕ್ಕೆ ಯಾವ ರೀತಿ ಕೊರೊನಾಪೀಡಿತರನ್ನು ನೋಡಿಕೊಳ್ಳಬೇಕು ಎಂಬ ಬಗ್ಗೆ ಸಲಹೆ ಸೂಚನೆ ನೀಡುವುದು. ಸಹಾಯ ವಾಣಿ ಕೇಂದ್ರ ಸ್ಥಾಪಿಸಿ ಸಾರ್ವಜನಿಕರಿಂದ ಕೊರೊನಾಗೆ ಸಂಬಂಧಿಸಿದಂತೆ ಕರೆ ಸ್ವೀಕರಿಸಿ ತಕ್ಷಣ ಬೇಕಾದ ನೆರವು, ಚಿಕಿತ್ಸೆಗೆ ಮಾರ್ಗದರ್ಶನ ಮಾಡುವುದು ಮುಖ್ಯ ಉದ್ದೇಶ ಎಂದು ಹೇಳಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ವೈದ್ಯಕೀಯ ಘಟಕದ ಪದಾಧಿಕಾರಿಗಳ ಜತೆ ಸಭೆ ನಡೆಸಿ ತಜ್ಞ ವೈದ್ಯರ ಪಟ್ಟಿ ನೀಡುವಂತೆ ಸೂಚಿಸಿ ದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಕಲಬು ರಗಿ,ಬೀದರ್‌, ಶಿವಮೊಗ್ಗ, ಬಳ್ಳಾರಿ, ತುಮಕೂರು ಸೇರಿ ಪ್ರಮುಖ ನಗರಗಳಲ್ಲಿ ಸಾಧ್ಯವಾದರೆ ಜಿಲ್ಲಾ ಕಾಂಗ್ರೆಸ್‌ ಕಚೇರಿ ಗಳಲ್ಲಿ ವೈದ್ಯರಸಹಿತ ಸಹಾಯವಾಣಿ ಪ್ರಾರಂಭಿಸುವಂತೆಯೂ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ