ಬಿಜೆಪಿ ಅಭ್ಯರ್ಥಿಯಾಗಿ ಕರೊನಾ ಆಯ್ಕೆ | ಏನಿದ್ದು ಅಚ್ಚರಿ?
17/11/2020
ಕೊಲ್ಲಂ: ಕರೊನಾ ಪದವನ್ನು ಕೇಳಿದ ತಕ್ಷಣವೇ ಜನರು ಭಯ ಭೀತರಾಗುತ್ತಾರೆ. ಆದರೆ, ಕೇರಳ ಕೊಲ್ಲಂ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಪೊರೇಶನ್ ಚುನಾವಣೆಗೆ ಬಿಜೆಪಿಯು ಕರೊನಾವನ್ನೇ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ.
ಅರೆ… ಕರೊನಾವನ್ನು ಹೇಗೆ ಅಭ್ಯರ್ಥಿಯಾಗಿ ಘೋಷಿಸಲಾಗಿದೆ ಎಂದು ನೀವು ಅಚ್ಚರಿ ಪಡಬೇಡಿ, ಬಿಜೆಪಿ ಅಭ್ಯರ್ಥಿಯ ಹೆಸರು ಕರೋನಾ ಥಾಮಸ್ ಅಂತ. ಇವರು ಬಿಜೆಪಿಯ ಸಕ್ರಿಯ ಕಾರ್ಯಕರ್ತ ಜಿನೂ ಸುರೇಶ್ ಅವರ ಪತ್ನಿ.
ಥಾಮಸ್-ಶೀಬಾ ದಂಪತಿಯ ಪುತ್ರಿಯಾಗಿರುವ ಕರೋನಾ ಥಾಮಸ್ ಅವರಿಗೆ ಅವರ ತಂದೆ-ತಾಯಿ ಕರೋನಾ ಎಂದು ಹೆಸರಿಟ್ಟಿದ್ದರು. ಕರೋನಾ ಅಂದ್ರೆ “ಲೈಟ್ ಸರ್ಕಲ್” ಎಂದು ಅರ್ಥ ಎಂದು ಹೇಳುತ್ತಿದ್ದಾರೆ.