ಕೊರೊನಾವನ್ನು ಕೊಲ್ಲಲು ವಿಮಾನ ನಿಲ್ದಾಣದಲ್ಲಿ ಪೂಜೆ ಮಾಡಿದ ಬಿಜೆಪಿ ಸಚಿವೆ!
ಇಂದೋರ್: ಕೊರೊನಾವನ್ನು ಕೊಲ್ಲಲು ಮಧ್ಯಪ್ರದೇಶದ ಬಿಜೆಪಿ ಸಚಿವೆಯೋರ್ವರು ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕ ಪೂಜೆ ಮಾಡುವ ಮೂಲಕ ಹುಚ್ಚಾಟ ಮೆರೆದಿರುವ ಘಟನೆ ನಡೆದಿದೆ.
ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಉಷಾ ಠಾಕೂರ್ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕ ಪೂಜೆ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ದೇವಿಯ ಪ್ರತಿಮೆಯ ಮುಂದೆ ಪೂಜೆ ನಡೆಸಿದ ಸಚಿವೆ, ಉಷಾ ಠಾಕೂರ್ ಫೇಸ್ ಮಾಸ್ಕ್ ಧರಿಸದೇ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
MP tourism and culture minister Usha Thakur prays before statue of Indore's legendary ruler Devi Ahilyabai Holkar at Indore Airport for end of COVID-19 pandemic's second wave. With 887 new cases, Indore presently has 6921 active cases. @NewIndianXpress @TheMornStandard pic.twitter.com/SnR6SlMepX
— Anuraag Singh (@anuraag_niebpl) April 9, 2021
ಇನ್ನೂ ಪೂಜೆಯ ವೇಳೆ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಸೆಗಣಿಯಿಂದ ಮಾಡಿದ “ಹಸು ಸೆಗಣಿ ಕೇಕ್”ನ್ನು ಸುಟ್ಟು ಮನೆಯಲ್ಲಿ ಪೂಜೆ ಮಾಡಿದರೆ ಮನೆಯನ್ನು 12 ಗಂಟೆಗಳ ಕಾಲ ಶುದ್ಧ ಮಾಡುವುದಕ್ಕೆ ಸಮಾನವಾಗಿರುತ್ತದೆ ಎಂದು ಹೇಳಿದರು.
ಅತೀ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಮಧ್ಯಪ್ರದೇಶ ಕೂಡ ಒಂದಾಗಿದೆ. ಕೇರಳ, ಕರ್ನಾಟಕ ಸೇರಿದಂತೆ ಹತ್ತು ರಾಜ್ಯಗಳು ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿವೆ. ಈ ಪೈಕಿ ಮಹಾರಾಷ್ಟ್ರದ ಪರಿಸ್ಥಿತಿ ಆತಂಕಕಾರಿಯಾಗಿದೆ. ಇದರ ನಡುವೆ ಬಿಜೆಪಿ ಸಚಿವರು, ಮುಖಂಡರುಗಳ ಹುಚ್ಚಾಟ ಮತ್ತೆ ಮುಂದುವರಿದಿದೆ.