ಕೊರೊನಾ ಲಸಿಕೆ ಪಡೆದ ಸೆಕ್ಯೂರಿಟಿ ಗಾರ್ಡ್ ಸ್ಥಿತಿ ಗಂಭೀರ | ಪ್ರಾಣಾಪಾಯದ ಸಾಧ್ಯತೆ!? - Mahanayaka
4:06 AM Thursday 19 - September 2024

ಕೊರೊನಾ ಲಸಿಕೆ ಪಡೆದ ಸೆಕ್ಯೂರಿಟಿ ಗಾರ್ಡ್ ಸ್ಥಿತಿ ಗಂಭೀರ | ಪ್ರಾಣಾಪಾಯದ ಸಾಧ್ಯತೆ!?

17/01/2021

ದೆಹಲಿ: ಕೊರೊನಾ ಲಸಿಕೆ ಪಡೆದ ದೆಹಲಿಯ ಏಮ್ಸ್ ನ ಸೆಕ್ಯುರಿಟಿ ಗಾರ್ಡ್ ತೀವ್ರ ಅಲರ್ಜಿಗೊಳಗಾಗಿದ್ದು, ಅವರ ಜೀವ ಅಪಾಯದಲ್ಲಿದೆ. ಸೂಕ್ತ ಚಿಕಿತ್ಸೆ ಅವರಿಗೆ ದೊರೆಯದೇ ಇದ್ದರೆ ಅವರ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

20 ವರ್ಷ ಸೆಕ್ಯುರಿಟಿ ಗಾರ್ಡ್ ನನ್ನು ಸದ್ಯ ಏಮ್ಸ್ ನ ಅಬ್ಸರ್ವೇಶನ್ ನಲ್ಲಿಡಲಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ನಿನ್ನೆಯಿಂದ ದೇಶಾದ್ಯಂತ ಕೊವಿಡ್ ಲಸಿಕೆ ಹಾಕುವ ಕಾರ್ಯ ಆರಂಭವಾಗಿದ್ದು,  ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳನ್ನು ಕೊಡಲಾಗುತ್ತಿದೆ.

ಕೇಂದ್ರ ಸರ್ಕಾರವು ಆತುರಾತುರವಾಗಿ ಕೊವಿಡ್ ಲಸಿಕೆ ವಿತರಣೆ ಮಾಡಿದೆ. ಕೊವಿಡ್ ಲಸಿಕೆಯ ಬಗ್ಗೆ ಸಾಕಷ್ಟು ವಿರೋಧಗಳು ವ್ಯಕ್ತವಾದರೂ ಕೇಂದ್ರ ಸರ್ಕಾರ ಬಹಳ ಆತುರಾತುರವಾಗಿ  ಲಸಿಕೆ ಬಿಡುಗಡೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.


Provided by

ಲಸಿಕೆಯ ಸ್ವತಃ ಕೇಂದ್ರ ಸರ್ಕಾರಕ್ಕೆ ನಂಬಿಕೆ ಇಲ್ಲ.ಬಿಜೆಪಿಯ ಯಾವುದೇ ಸಚಿವರಾಗಲಿ, ಶಾಸಕರಾಗಲಿ ಕೊವಿಡ್ ಲಸಿಕೆ ತೆಗೆದುಕೊಂಡಿಲ್ಲ. ಬಡಪಾಯಿ ಸೆಕ್ಯುರಿಟಿ ಗಾರ್ಡ್ ಗಳ ಮೇಲೆ ಈ ಲಸಿಕೆಗಳನ್ನು ಪ್ರಯೋಗಿಸಲಾಗಿದೆ. ಸಚಿವರಿಗೆ ಹಾಗೂ ಶಾಸಕರಿಗೆ ಈ ಲಸಿಕೆಯ ಮೇಲೆ ನಂಬಿಕೆ ಇಲ್ಲದ ಕಾರಣ ಯಾರೂ ಕೂಡ ಲಸಿಕೆ ಪಡೆಯಲು ಮುಂದಾಗುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಪೂರ್ಣ ಪ್ರಮಾಣದಲ್ಲಿ ಕ್ಲೀನಿಕಲ್ ಟ್ರಯಲ್ ಮುಗಿಸದೇ ಈ ಲಸಿಕೆಯನ್ನು ಬಳಕೆಗೆ ಅನುಮತಿ ನೀಡಲಾಗಿದೆ. ಜನರಿಗೆ ಇದರಿಂದ ತೊಂದರೆಯಾದರೆ, ಯಾರು ಹೊಣೆ ಎಂಬ ಮಾತುಗಳನ್ನು ಇದೀಗ ಸಾರ್ವಜನಿಕರು ಕೇಳುತ್ತಿದ್ದಾರೆ.

ಇತ್ತೀಚಿನ ಸುದ್ದಿ