ಕೊರೊನಾ ಲಸಿಕೆ ಪಡೆದವರು ಸಲಿಂಗಿಗಳಾಗುತ್ತಾರೆ | ಧರ್ಮಗುರು ಹೇಳಿಕೆ - Mahanayaka

ಕೊರೊನಾ ಲಸಿಕೆ ಪಡೆದವರು ಸಲಿಂಗಿಗಳಾಗುತ್ತಾರೆ | ಧರ್ಮಗುರು ಹೇಳಿಕೆ

19/01/2021

ಕೊವಿಡ್ 19 ಲಸಿಕೆ ಪಡೆದುಕೊಂಡವರು ಸಲಿಂಗಿಗಳಾಗಿ ಬದಲಾಗುತ್ತಾರೆ ಎಂದು ಇಸ್ರೇಲ್ ಜೀವಿಶ್ ಧಾರ್ಮಿಕ ಗುರು ರಬ್ಬಿ ಹೇಳಿದ್ದು, ಇದೀಗ ಕೊರೊನಾ ಲಸಿಕೆ ಪಡೆದುಕೊಳ್ಳುವವರಲ್ಲಿ ಆತಂಕ ಸೃಷ್ಟಿಯಾಗಿದೆ.

 

ಜಾಗತಿಕ ರಾಜಕಾರಣದಲ್ಲಿ ಹೊಸ ಬದಲಾವಣೆ ತರಲೆಂದು ದುರುದ್ದೇಶಪೂರಿತ ಮನಸ್ಥಿತಿಗಳ ಸರ್ಕಾರಗಳು ಕೆಲಸಗಳನ್ನು ಮಾಡುತ್ತಿವೆ ಎಂದು ರಬ್ಬಿ ಆರೋಪಿಸಿದ್ದಾರೆ.

 

ಪೂರ್ಣ ಅಭಿವೃದ್ಧಿಯಾಗದ ವಸ್ತುವಿನಿಂದ ಅಭಿವೃದ್ಧಿಪಡಿಸಲಾದ ಯಾವುದೇ ಲಸಿಕೆಯಿಂದ ವಿರುದ್ಧ ಲಿಂಗಿಗಳ ಸ್ವಭಾವಗಳು ಮೈಗಂಟಿಕೊಳ್ಳುತ್ತವೆ ಎಂದು ರಬ್ಬಿ ಡೇನಿಯಲ್ ಅಸೊರ್ಹೇಳಿರುವುದು ಇಸ್ರೇಲಿ ಮಾಧ್ಯಮಗಳಲ್ಲಿ ವರದಿಯಾಗಿದೆ.

 

 

ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಲಸಿಕೆ ಅಭಿವೃದ್ಧಿಪಡಿಸಿದ ಫೈಜರ್ಹಾಗೂ ಬಯೋಎನ್ಟೆಕ್ಸಂಸ್ಥೆಗಳು ಕ್ರಿಮಿನಲ್ಸಂಸ್ಥೆಗಳು ಎಂದು ಧರ್ಮಗುರು ರಬ್ಬಿ ಆಪಾದಿಸಿದ್ದಾರೆ.

 

ಕೊರೊನಾ ಲಸಿಕೆ ಸಂಬಂಧ ಈಗಾಗಲೇ ಹಲವಾರು ವಿವಾದಗಳು, ಅಪಪ್ರಚಾರಗಳು ನಡೆಯುತ್ತಿವೆ. ಈ ನಡುವೆ ರಬ್ಬಿ ಕೂಡ ಹೇಳಿಕೆ ನೀಡಿದ್ದಾರೆ. ಕೊರೊನಾ ಲಸಿಕೆಯ ಸೈಡ್ ಎಫೆಕ್ಟ್ ಗಳ ಬಗ್ಗೆಯೂ ಚರ್ಚೆಗಳಾಗುತ್ತಿವೆ. ಇಂತಹ ಸಂದರ್ಭವನ್ನು ಬಳಸಿಕೊಂಡು ರಬ್ಬಿ ಹೇಳಿಕೆ ನೀಡಿದ್ದಾರೆ ಎಂಬ ಆಕ್ರೋಶ ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ