ಕೊರೊನಾ ಲಸಿಕೆಗೆ ಏಕರೂಪದ ಬೆಲೆ ನಿಗದಿಗೊಳಿಸಿ: ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಆಗ್ರಹ

23/04/2021
ಲಕ್ನೋ: ಕೊರೊನಾ ಲಸಿಕೆಗೆ ಏಕರೂಪ ಬೆಲೆ ನಿಗಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ನೀತಿ ಜಾರಿಗೊಳಿಸಬೇಕು ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಆಗ್ರಹಿಸಿದ್ದಾರೆ.
ಏಕರೂಪ ಬೆಲೆ ನಿಗಪಡಿಸುವುದರ ಜತೆಗೆ ಆಸ್ಪತ್ರೆಗಳಿಗೆ ಅಗತ್ಯವಿರುವಷ್ಟು ಅಮ್ಲಜನಕ ಸರಬರಾಜು ಮಾಡುವ ಭರವಸೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದು, ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಕೊರೊನಾ ಲಸಿಕೆ ಸರಬರಾಜು ಮಾಡಲು ಬೇರೆ ಬೇರೆ ಬೆಲೆ ನಿಗಪಡಿಸಲಾಗಿದೆ. ಇದರ ಬದಲು ಎಲ್ಲರಿಗೂ ಏಕರೂಪ ಬೆಲೆಯಲ್ಲಿ ಲಸಿಕೆ ವಿತರಿಸಬೇಕು ಎಂದು ಅವರು ಟ್ವೀಟರ್ ನಲ್ಲಿ ಆಗ್ರಹಿಸಿದ್ದಾರೆ.
ದೇಶದ್ಯಾಂತ ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೈಗಾರಿಕೆ ಉದ್ದೇಶಕ್ಕೆ ಸರಬರಾಜು ಮಾಡುವ ಅಕ್ಸಿಜನ್‍ಗಳನ್ನು ರದ್ದುಪಡಿಸಿ ಅಮ್ಲಜನಕ ಕೊರತೆ ಎದುರಿಸುತ್ತಿರುವ ಆಸ್ಪತ್ರೆಗಳಿಗೆ ರವಾನಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವುದು ಮಾಯಾವತಿ ಆಗ್ರಹವಾಗಿದೆ.