ಚರ್ಚ್ ಗಳಲ್ಲಿ ಕೊರೊನಾ ಮಾರ್ಗಸೂಚಿ ಪಾಲಿಸಿ | ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನಾ ಕರೆ

ಪುತ್ತೂರು: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಕೊವಿಡ್ ಮಾರ್ಗಸೂಚಿಯನ್ನು ಕೆಥೋಲಿಕ್ ಪೂಜಾ ಸ್ಥಳಗಳಲ್ಲಿ ಪಾಲಿಸಬೇಕು ಎಂದು ಕೆಥೋಲಿಕ್ ಪೂಜಾ ಸ್ಥಳಗಳಲ್ಲಿ ಪಾಲಿಸಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂ.ಡಾ.ಪೀಟರ್ ಪಾವ್ಲ್ ಸಲ್ದಾನಾ ಕರೆ ನೀಡಿದ್ದಾರೆ.
ತಮ್ಮ ವ್ಯಾಪ್ತಿಯ ಎಲ್ಲ ಚರ್ಚ್ ಗಳಿಗೆ ಪತ್ರದ ಮೂಲಕ ಕರೆ ನೀಡಿರುವ ಅವರು, ರಾಜ್ಯ ಸರ್ಕಾರ ಹೊರಡಿರುವ ಆದೇಶದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶವನ್ನು ಪೂಜಾ ಸ್ಥಳಗಳಲ್ಲಿ ಪಾಲಿಸುವಂತೆ ತಿಳಿಸಿದ್ದಾರೆ.
ಎಪ್ರಿಲ್ 24ರಿಂದ ಮೇ 24ರವರೆಗೆ ಭಾಗಶಃ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಮದುವೆ ಮತ್ತು ಅಂತ್ಯಕ್ರಿಯೆ ಹೊರತುಪಡಿಸಿ ಭಕ್ತರಿಗೆ ಎಲ್ಲ ಸಾರ್ವಜನಿಕ ಧಾರ್ಮಿಕ ಪೂಜಾ ಸ್ಥಳಗಳನ್ನು ಮುಚ್ಚಲಾಗಿದ್ದು, ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಪತ್ರ ಪಡೆದ ಬಳಿಕ ಕೊರೊನಾ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಚರ್ಚ್ ಒಳಗೆ ವಿವಾಹ ಮತ್ತು ಅಂತ್ಯ ಕ್ರಿಯೆ ಕಾರ್ಯಕ್ರಮಗಳನ್ನು ನಡೆಸಬಹುದು ಎಂದು ಅವರು ತಿಳಿಸಿದ್ದಾರೆ.
ಮದುವೆಗಳಿಗಾಗಿ ಗರಿಷ್ಠ 50 ಮಂದಿ ಮತ್ತು ಅಂತ್ಯಕ್ರಿಯೆಗಳಿಗೆ 20 ಮಂದಿ ಭಾಗವಹಿಸಲು ಅನುಮತಿ ಇದ್ದು ಪಾಸ್ ಗಳನ್ನು ಪಡೆದುಕೊಳ್ಳಬೇಕು ಎಂದು ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹಾ ಪತ್ರದಲ್ಲಿ ತಿಳಿಸಿದ್ದಾರೆ.