ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ!

kageri
26/04/2021

ಕಾರವಾರ: ಕೊರೊನಾ ಮಾರ್ಗಸೂಚಿಯನ್ನು ಸ್ವತಃ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಉಲ್ಲಂಘಿಸಿರುವ ಬಗ್ಗೆ ವರದಿಯಾಗಿದ್ದು, ಮದುವೆ ಕಾರ್ಯಕ್ರಮದಲ್ಲಿ ಸ್ಪೀಕರ್ ಮಾಸ್ಕ್ ಧರಿಸದೇ, ದೈಹಿಕ ಅಂತರ ಕಾಪಾಡದೇ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಫೋಟೋವೊಂದು ವೈರಲ್ ಆಗಿದೆ.

ಭಾನುವಾರ ಸಿದ್ಧಾಪುರದಲ್ಲಿ ನಡೆದ ತಮ್ಮ ಆಪ್ತರ ಮದುವೆ ಕಾರ್ಯಕ್ರಮಕ್ಕೆ ಕೊರೊನಾ ಹಾಟ್ ಸ್ಪಾಟ್ ಆಗಿರುವ ಬೆಂಗಳೂರಿನಿಂದ ಬಂದ ಸ್ಪೀಕರ್,  ಮಾಸ್ಕ್ ಧರಿಸದೇ, ಜೋಡಿಯನ್ನು ಹಾರೈಸಿದ್ದಾರೆ.

ರಾಜಕಾರಣಿಗಳು ಹೇಗೆ ಬೇಕಾದರೂ ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಜನ ಸಾಮಾನ್ಯರಿಗೆ ಮಾತ್ರ ರೂಲ್ಸ್ ಗಳು. ಕೊರೊನಾ ಕಾನೂನುಗಳು ಜನಸಾಮಾನ್ಯರಿಗೆ ಮಾತ್ರವೇ? ಜನಪ್ರತಿನಿಧಿಗಳಿಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version