ಕೊರೊನಾ ನೆಗೆಟಿವ್ ಬಂದಿದೆ ಎಂದು ಖುಷಿಪಡೋ ಹಾಗಿಲ್ಲ | ವೈದ್ಯರು ಏನು ಹೇಳುತ್ತಿದ್ದಾರೆ ಗೊತ್ತಾ?
ಬೆಂಗಳೂರು: ಕೊರೊನಾ ಮಹಾಮಾರಿ ದೇಶವನ್ನೇ ಹಿಂಡುತ್ತಿದೆ. ಈ ನಡುವೆ, ನಮಗೆ ಕೊರೊನಾ ಪಾಸಿಟಿವ್ ಬಂದಿಲ್ಲ, ನಾವ್ ಸೇಫ್ ಎನ್ನುವ ಭ್ರಮೆಯಲ್ಲಿದ್ದರೆ ತಕ್ಷಣವೇ ಅದನ್ನು ಬಿಟ್ಟು ಬಿಡಿ. ಯಾಕೆಂದರೆ ಕೊರೊನಾ ನೆಗೆಟಿವ್ ಬಂದವರಿಗೆ ಕೂಡ ಕೊರೊನಾ ಹಾನಿಯುಂಟು ಮಾಡುತ್ತಿದೆ ಎಂಬ ಆತಂಕಕಾರಿ ವರದಿ ಬಂದಿದೆ.
ವಿಕ್ಟೋರಿಯಾ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಿವಕುಮಾರ್ ಅವರು ನೀಡಿರುವ ಮಾಹಿತಿ ಇದೀಗ ಜನರನ್ನು ಬೆಚ್ಚಿ ಬೀಳಿಸಿದೆ. ಕೋವಿಡ್ ನೆಗೆಟಿವ್ ಬಂದವರ ಶ್ವಾಸಕೋಶಕ್ಕೂ ಸೋಂಕು ತಗಲಿರುತ್ತದೆ. ಹೀಗಾಗಿ ಜನರು ಶ್ವಾಸಕೋಶಕ್ಕೆ ಸೋಂಕು ತಗುಲುವ ಮುನ್ನ ಎಚ್ಚರವಾಗಿರ ಬೇಕು ಎಂದು ಹೇಳಿದ್ದಾರೆ.
ವೆಂಟಿಲೇಟರ್ ಗೆ ಹೋದವರು ಬದುಕುಳಿಯುವುದು ಕಷ್ಟಸಾಧ್ಯ. ಶಾಸ್ವಕೋಶಕ್ಕೆ ಕೊರೋನಾ ಸೋಂಕು ತಗುಲಿದ ಶೇಕಡ 90 ರಷ್ಟು ಜನ ಸಾಯುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದ್ದಾರೆ.
ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ಉದಾಸೀನ ಮಾಡುವಂತಿಲ್ಲ. ನಿರ್ಲಕ್ಷ ವಹಿಸುವಂತಿಲ್ಲ ಎಂದು ಶಿವಕುಮಾರ್ ಅವರು ಸಾರ್ವಜನಿಕರನ್ನು ಎಚ್ಚೆತ್ತುಕೊಳ್ಳುವಂತೆ ಮನವಿ ಮಾಡಿದ್ದಾರೆ.