ಸಲೈನ್ ನೀರನ್ನು ಇಂಜೆಕ್ಟ್ ಮಾಡಿ ಕೊರೊನಾ ರೋಗಿಯ ಹತ್ಯೆ! | ಆಸ್ಪತ್ರೆ 8 ಸಿಬ್ಬಂದಿ ಅರೆಸ್ಟ್ - Mahanayaka
10:32 PM Wednesday 5 - February 2025

ಸಲೈನ್ ನೀರನ್ನು ಇಂಜೆಕ್ಟ್ ಮಾಡಿ ಕೊರೊನಾ ರೋಗಿಯ ಹತ್ಯೆ! | ಆಸ್ಪತ್ರೆ 8 ಸಿಬ್ಬಂದಿ ಅರೆಸ್ಟ್

remdesivir
25/04/2021

ಮೀರತ್: ಕೊವಿಡ್ ರೋಗಿಗೆ ರೆಮ್ಡಿಸಿವಿರ್ ಚುಚ್ಚು ಮದ್ದು ನೀಡುವ ಬದಲು  ಸಲೈನ್ ನೀರನ್ನು ಇಂಜೆಕ್ಟ್ ಮಾಡಿದ್ದರಿಂದಾಗಿ ರೋಗಿಯು ದಾರುಣವಾಗಿ ಮೃತಪಟ್ಟ ಘಟನೆ  ಉತ್ತರಪ್ರದೇಶದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಪಟ್ಟಂತೆ 8 ಜನರನ್ನು ಉತ್ತರಪ್ರದೇಶ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಗಾಜಿಯಾಬಾದ್ ಮೂಲದ ರೋಗಿ ಶೋಭಿತ್ ಜೈನ್ ಅವರನ್ನು ಕೊರೊನಾ ವಾರ್ಡ್ ಗೆ ದಾಖಲಿಸಲಾಗಿತ್ತು. ಅವರಿಗೆ ತುರ್ತಾಗಿ ಚಿಕಿತ್ಸೆ ನೀದುವಂತೆ ಕುಟುಂಬದ ಸದಸ್ಯರೇ ರೆಮ್ಡಿಸಿವಿರ್ ನ್ನು ಆಸ್ಪತ್ರೆ ಸಿಬ್ಬಂದಿಗೆ ತಂದುಕೊಟ್ಟಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಸಲೈನ್ಸ್ ನೀರನ್ನು ಚುಚ್ಚು ಮದ್ದು ಎಂದು ನೀಡಿ ವಂಚಿಸಿದ್ದು, ರೆಮ್ಡಿಸಿವಿರ್ ನ್ನು ಬೇರೆ ರೋಗಿಗೆ 25 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಇತ್ತ ಗಂಭೀರ ಸ್ಥಿತಿಯಲ್ಲಿದ್ದ ಶೋಭಿತ್ ಜೈನ್ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಇನ್ನೂ ಶೋಭಿತ್ ಜೈನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಾರ್ಡ್ ಬಾಯ್ ಗಳನ್ನು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ