ಕೊರೊನಾ ರೋಗಿಯ ಮೇಲೆ ನರ್ಸ್ ನಿಂದ ಅತ್ಯಾಚಾರ!
14/05/2021
ಭೋಪಾಲ್: ಕೊರೊನಾ ರೋಗಿಯ ಮೇಲೆ ಪುರುಷ ನರ್ಸ್ ವೋರ್ವ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ನಡೆದಿದ್ದು, 43 ವರ್ಷ ವಯಸ್ಸಿನ ಸಂತ್ರಸ್ತ ಕೊರೊನಾ ಸೋಂಕಿತೆ ಮೃತಪಟ್ಟಿದ್ದಾರೆ.
ಭೋಪಾಲ್ ನ ಬಿ.ಎಂ.ಹೆಚ್.ಆರ್.ಸಿ. ಆಸ್ಪತ್ರೆಯಲ್ಲಿ ಏಪ್ರಿಲ್ 6ರಂದು ಈ ಘಟನೆ ನಡೆದಿತ್ತು. ಘಟನೆಯ ಬಳಿಕ ಪ್ರಕರಣವನ್ನು ಮುಚ್ಚಿ ಹಾಕಲು ಆಸ್ಪತ್ರೆಯ ಆಡಳಿತ ಮಂಡಳಿ ಯತ್ನಿಸಿತ್ತು. ಆದರೆ, ಕಳೆದ ಒಂದು ತಿಂಗಳುಗಳಿಂದ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, ಇದರಿಂದಾಗಿ ನಿಶತ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಈ ಹಿಂದೆಯೂ ಆರೋಪಿ 24 ವರ್ಷ ವಯಸ್ಸಿನ ಸ್ಟಾಫ್ ನರ್ಸ್ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದ ಎಂದು ಹೇಳಲಾಗಿದ್ದು, ಕೆಲಸದ ಅವಧಿಯಲ್ಲಿ ಮದ್ಯಪಾನ ಮಾಡಿಕೊಂಡು ಬಂದ ಕಾರಣಕ್ಕಾಗಿ ಒಂದು ಬಾರಿ ಈತ ಅಮಾನತು ಆಗಿದ್ದ ಎಂದು ಹೇಳಲಾಗಿದೆ. ಈತನ ಮೇಲೆ ಇಷ್ಟೆಲ್ಲ ಕೇಸ್ ಗಳಿದ್ದರೂ ಆಸ್ಪತ್ರೆ ಆಡಳಿತ ಮಂಡಳಿ, ಆತನನ್ನು ಕೆಲಸಕ್ಕೆ ಸೇರಿಸಿಕೊಂಡಿತ್ತು.