ಕೊರೊನಾ ಸೋಂಕಿತ ಅಣ್ಣನನ್ನು ಮಚ್ಚಿನಿಂದ ಹೊಡೆದು ಹತ್ಯೆ ಮಾಡಿದ ತಮ್ಮ

chikkamagaluru
16/05/2021

ಚಿಕ್ಕಮಗಳೂರು: ಕೊರೊನಾ ಸೋಂಕು ತಗಲಿದ್ದ ಅಣ್ಣನನ್ನು ತಮ್ಮ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸಾ ತಾಲೂಕಿನಲ್ಲಿ ನಡೆದಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಮಹಾವೀರ ಎಂಬವರಿಗೆ ಕೊರೊನಾ ಸೋಂಕು ತಗಲಿದ್ದು, ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ, ಆಸ್ಪತ್ರೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ ಎಂದು ಪಟ್ಟು ಹಿಡಿದು ಡಿಸ್ಚಾರ್ಜ್ ಆಗಿ  ಮನೆಗೆ ಬಂದಿದ್ದರು.

ಕೊರೊನಾ ಸೋಂಕು ತಗಲಿದ್ದ ಅಣ್ಣ ಮನೆಗೆ ಬಂದಿದ್ದರಿಂದ ಅಣ್ಣ, ತಮ್ಮನ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿದ್ದು, ಅಣ್ಣ ಮಹಾವೀರನ ಮೇಲೆ ಕೋಪಗೊಂಡ ತಮ್ಮ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version