ಕೊರೊನಾ ಸೋಂಕಿತ ಮಹಿಳೆಯ ಮೇಲೆ ಆಸ್ಪತ್ರೆಯಲ್ಲಿಯೇ ಸಾಮೂಹಿಕ ಅತ್ಯಾಚಾರ | ಮಹಿಳೆ ಸಾವು

patna news update
20/05/2021

ಪಾಟ್ನಾ: ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ 45 ವರ್ಷ ವಯಸ್ಸಿನ ಮಹಿಳೆಯ ಮೇಲೆ ಬಿಹಾರ ರಾಜಧಾನಿ ಪಾಟ್ನಾದ ಖಾಸಗಿ ಆಸ್ಪತ್ರೆಯ ಮೂವರು ಸಿಬ್ಬಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಅತ್ಯಾಚಾರದ ಬಳಿಕ ತೀವ್ರವಾಗಿ ಆರೋಗ್ಯ ಹದಗೆಟ್ಟು ಮಹಿಳೆ ಮೃತಪಟ್ಟಿದ್ದಾರೆ.

ಪಾಟ್ನಾದ ಪರಾಸ್ ಎಚ್ ಎಂ ಆರ್ ಐ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಮೇ 15ರಂದು ಕೊರೊನಾ ಲಕ್ಷಣಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಆರೋಗ್ಯವಾಗಿದ್ದರು. ಮೇ 16ರಂದು ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ವಿಚಾರವನ್ನು ಅವರು ತಮ್ಮ ಮಗಳ ಬಳಿಯಲ್ಲಿ ಹೇಳಿಕೊಂಡಿದ್ದಾರೆ.

ಅತ್ಯಾಚಾರ  ಬಳಿಕ ತಾಯಿಯನ್ನು ವೆಂಟಿಲೇಟರ್ ಗೆ ಶಿಫ್ಟ್ ಮಾಡಲಾಗದೆ. ಈ ವೇಳೆ ನನ್ನ ಬಳಿ ಅವರು ಅರ್ಜಿಯೊಂದಕ್ಕೆ ಸಹಿ ಮಾಡಿಸಿಕೊಂಡಿದ್ದಾರೆ. ಪೊಲೀಸರಿಗೆ ಹೇಳಿಕೆ ನೀಡುವ ಭಯದಲ್ಲಿ ವೆಂಟಿಲೇಟರ್ ಗೆ ಶಿಫ್ಟ್ ಮಾಡಲಾಗಿದೆ. ಜೊತೆಗೆ ಪೊಲೀಸರಿಗೆ ಹೇಳಿಕೆ ನೀಡಬಾರದು ಎನ್ನುವ ಕಾರಣಕ್ಕಾಗಿ ಕತ್ತಿನೊಳಗೆ ಟ್ಯೂಬ್ ಅಳವರಿಸಿದ್ದಾರೆ ಎನ್ನುವ ಅನುಮಾನವೂ ನಮಗಿದೆ ಎಂದು ಸಂತ್ರಸ್ತೆಯ ಪುತ್ರಿ ಹೇಳಿದ್ದಾರೆ.

ಇನ್ನೂ ಮಹಿಳೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ವಾದಿಸಿದೆ. ಸದ್ಯ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಗಿಸಲಾಗಿದೆ. ದೊಡ್ಡ ಆಸ್ಪತ್ರೆಗಳಾಗಿರುವುದರಿಂದ ಬಡ ಮಹಿಳೆಗೆ ನ್ಯಾಯ ಸಿಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಇತ್ತೀಚಿನ ಸುದ್ದಿ

Exit mobile version