ಕೊರೊನಾ ವೈರಸ್ ಗೆ ಸ್ವಾಮೀಜಿಯ 19 ವರ್ಷದ ಪುತ್ರ ಬಲಿ! - Mahanayaka
6:18 AM Thursday 12 - December 2024

ಕೊರೊನಾ ವೈರಸ್ ಗೆ ಸ್ವಾಮೀಜಿಯ 19 ವರ್ಷದ ಪುತ್ರ ಬಲಿ!

prasad
23/05/2021

ಕೊಪ್ಪಳ: ಕೊರೊನಾ ವೈರಸ್ ಗೆ 19 ವರ್ಷ ವಯಸ್ಸಿನ ಯುವಕ ಬಲಿಯಾಗಿದ್ದು,  ಜಿಲ್ಲೆಯಲ್ಲಿ 20 ವರ್ಷ ವಯಸ್ಸಿನ ಯುವಕರ ಸಾವಿನ  ಮೊದಲನೇಯ ಪ್ರಕರಣ ಇದಾಗಿದ್ದು, ಇದರಿಂದ ಜನರು ಆತಂಕಗೊಂಡಿದ್ದಾರೆ.

‌ಪ್ರಸಿದ್ಧ ಸೂಳೆಕಲ್ ಬೃಹನ್ಮಠದ ಗವಿಸಿದ್ದೇಶ್ವರ ಸ್ವಾಮೀಜಿಯವರ ಎರಡನೇ ಪುತ್ರ 19 ವರ್ಷ ವಯಸ್ಸಿನ ಪ್ರಸಾದ್ ಮೃತಪಟ್ಟವರಾಗಿದ್ದಾರೆ. ಪ್ರಸಾದ್ ಅವರು ಕಳೆದ 10 ದಿನಗಳಿಂದ ಕೊಪ್ಪಳ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.

ಕೊರೊನಾ ಎರಡನೇ ಅಲೆಯಲ್ಲಿ ಯುವಕರ ಸಾವು ಕೂಡ ಹೆಚ್ಚಾಗುತ್ತಿದ್ದು, 10ರಿಂದ 19 ವರ್ಷದೊಳಗಿನ ಯುವಕರು ಹೆಚ್ಚಾಗಿ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದೀಗ ಕೊಪ್ಪಳ ಜಿಲ್ಲೆಯಲ್ಲಿ 20 ವರ್ಷದೊಳಗಿನ ಯುವಕರ ಸಾವು ಪ್ರಕರಣ ಇದೇ ಮೊದಲನೆಯದ್ದಾಗಿದ್ದು ಜನರು ಬೆಚ್ಚಿಬಿದ್ದಿದ್ದಾರೆ.

ಇತ್ತೀಚಿನ ಸುದ್ದಿ