ಕೊರೊನಾದಿಂದ ಪಾರಾಗಲು ಈ ಕಲಾವಿದ ಮಾಡಿದ ಪ್ಲಾನ್ ನೋಡಿ - Mahanayaka
7:40 AM Thursday 19 - September 2024

ಕೊರೊನಾದಿಂದ ಪಾರಾಗಲು ಈ ಕಲಾವಿದ ಮಾಡಿದ ಪ್ಲಾನ್ ನೋಡಿ

oasis portebel
20/04/2021

ಬೆಲ್ಜಿಯಂ: ಕೊರೊನಾದಿಂದ ಪಾರಾಗಲು ದೇಶದಲ್ಲಿ ಎಂತೆಂತಹದ್ದೋ ಸಾಹಸಗಳನ್ನು ಜನರು ಮಾಡುತ್ತಿದ್ದಾರೆ ಈ ನಡುವೆ ಬೆಲ್ಜಿಯಂನ ಕಲಾವಿದ ಹಾಗೂ ಸಾಮಾಜಿಕ ಕಾರ್ಯಕರ್ತ ಅಲೈನ್ ವರ್ಸ್‌ಚುರೆನ್ ಅವರು ಮಾಡಿರುವ ಕೆಲಸ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

 

ಅಲೈನ್ ವರ್ಸ್‌ಚುರೆನ್ ಎಂಬವರು ಕುತ್ತಿಗೆಯ ಸುತ್ತೆಲ್ಲ ಪೋರ್ಟೆಬಲ್​ ಒಯಸಿಸ್​​ ಹಾಕಿಕೊಂಡು ತಿರುಗುವ ಮೂಲಕ ಭಾರೀ ಸುದ್ದಿಯಾಗ್ತಿದ್ದಾರೆ. ಇದೊಂದು ಮಿನಿ ಗ್ರೀನ್​ ಹೌಸ್ ಆಗಿದ್ದು ಇದರಲ್ಲಿ ಅರೊಮ್ಯಾಟಿಕ್​ ಗಿಡಗಳಿವೆ. ಇವುಗಳ ಸಹಾಯದಿಂದ ಅಲೈನ್​​ ಶುದ್ಧ ಗಾಳಿಯನ್ನ ಉಸಿರಾಡುತ್ತಾರೆ.


Provided by

 

61 ವರ್ಷದ ಅಲೈನ್​ 15 ವರ್ಷಗಳ ಹಿಂದೆಯೇ ಈ ಉಪಾಯವನ್ನು ಅವರು ಕಂಡು ಹಿಡಿದಿದ್ದರು. ಟುನೇಶಿಯಾಸ ಓಯಸ್​ಗಳಿಂದ ಪ್ರೇರಣೆ ಪಡೆದು ಅವರು ಮಾಡಿರುವ ಪ್ಲಾನ್ ಇದೀಗ ಕೊವಿಡ್ 19 ಸಂದರ್ಭದಲ್ಲಿ ಸಹಾಯಕವಾಗಿದೆ.

 

ಯುರೋಪ್ ನಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವುದು ಕಡ್ಡಾಯವಾಗಿದೆ. ಇದೇ ಸಂದರ್ಭದಲ್ಲಿ ಅಲೈನ್ ವರ್ಸ್‌ಚುರೆನ್ ಅವರ ಸಂಶೋಧನೆ ಜನರ ಆಕರ್ಷಕ ಬಿಂದುವಾಗಿದೆ.

ಇತ್ತೀಚಿನ ಸುದ್ದಿ