ಕೊರೊನಾದಿಂದ ತಾಯಿಯನ್ನು ಕಳೆದುಕೊಂಡ ಬಾಲಕಿ ಬರೆದ ಪತ್ರ ವೈರಲ್! | ಪತ್ರ ಓದಿ ಕಣ್ಣೀರಿಟ್ಟ ಜನರು! - Mahanayaka
2:08 AM Wednesday 11 - December 2024

ಕೊರೊನಾದಿಂದ ತಾಯಿಯನ್ನು ಕಳೆದುಕೊಂಡ ಬಾಲಕಿ ಬರೆದ ಪತ್ರ ವೈರಲ್! | ಪತ್ರ ಓದಿ ಕಣ್ಣೀರಿಟ್ಟ ಜನರು!

hruthiksha
23/05/2021

ಕೊಡಗು: ಕೊವಿಡ್ ನಿಂದಾಗಿ ತಾಯಿಯನ್ನು ಕಳೆದುಕೊಂಡಿರುವ ಬಾಲಕಿಯೊಬ್ಬಳು ಬರೆದಿರುವ ಪತ್ರವನ್ನು ಓದಿದರೆ ಎಂತಹವರ ಕರುಳು ಕೂಡ ಚುರ್ ಎನ್ನದಿರದು. ತನ್ನ ತಾಯಿಯನ್ನು ಕಳೆದುಕೊಳ್ಳುವುದರ ಜೊತೆಗೆ ತಾಯಿಯ ನೆನಪುಗಳನ್ನೂ ಕಳೆದುಕೊಳ್ಳುವಂತಹ ಸ್ಥಿತಿಗೆ ತಲುಪಿರುವ ಬಾಲಕಿಯ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೊಡಗು ಜಿಲ್ಲೆಯ ಕುಶಾಲನಗರದ ಗುಮ್ಮನಕೊಲ್ಲಿ ಗ್ರಾಮದ ಹೃತಿಕ್ಷ ಎಂಬ ಬಾಲಕಿ ಕೊಡಗು ಜಿಲ್ಲಾಧಿಕಾರಿಗಳು ಮತ್ತು ಶಾಸಕರಿಗೆ ಹಾಗೂ ಕೊವಿಡ್ ಸಿಬ್ಬಂದಿಗೆ ಬರೆದಿರುವ ಈ ಪತ್ರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೃತಿಕ್ಷ ತಾಯಿ ಕೊವಿಡ್ ನಿಂದ ಅಸ್ವಸ್ಥರಾಗಿ ಮಡಿಕೇರಿಯ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.  ಈ ಸಂದರ್ಭದಲ್ಲಿ ಆಕೆ ತಂದೆಯ ಜೊತೆಗೆ ಹೋಮ್ ಕ್ವಾರಂಟೈನ್ ಆಗಿದ್ದಳು. ಮೇ 16ರಂದು ತಾಯಿ ಕೊರೊನಾ ವೈರಸ್ ಗೆ ಬಲಿಯಾಗಿದ್ದರು.

ತಾಯಿಯ ಸಾವಿನ ಸುದ್ದಿಯಿಂದ ತಂದೆ ಮತ್ತು ಮಗಳು ತೀವ್ರ ದುಃಖದಲ್ಲಿದ್ದರು. ಇದೇ ಸಂದರ್ಭದಲ್ಲಿ ತಾಯಿ ಕೊಂಡೊಯ್ದಿದ್ದ ಮೊಬೈಲ್ ಆಸ್ಪತ್ರೆಯಿಂದ ನಾಪತ್ತೆಯಾಗಿದೆ. “ತಾಯಿಯಲ್ಲಿದ್ದ ಮೊಬೈಲ್ ನ್ನು ಯಾರೋ ತೆಗೆದುಕೊಂಡು ಹೋಗಿದ್ದಾರೆ. ಅದರಲ್ಲಿ ನನ್ನ ತಾಯಿಯ ನೆನಪುಗಳಿವೆ. ಹಾಗಾಗಿ ಯಾರಿಗಾದರೂ ಆ ಮೊಬೈಲ್ ಸಿಕ್ಕಿದ್ದರೆ, ಅಥವಾ ತೆಗೆದುಕೊಂಡಿದ್ದರೆ ದಯವಿಟ್ಟು ಈ ತಬ್ಬಲಿಗೆ ಅದನ್ನು ತಲುಪಿಸಿ ಎಂದು ಹೃತಿಕ್ಷ ಬೇಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ