ಕೊರೊನಾಕ್ಕೆ 18 ಮಂದಿ ಬಲಿ | 786 ಮಂದಿಗೆ ಕೊರೊನಾ ಪಾಟಿಸಿವ್ | ಎಲ್ಲಿ? ಈ ಸುದ್ದಿ ಓದಿ
27/04/2021
ಬಳ್ಳಾರಿ: ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಸೋಮವಾರ ಬರೋಬ್ಬರಿ 786 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 18 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಬಳ್ಳಾರಿಯಲ್ಲಿ ಕೂಡ ಕೊವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೃತದ ಸಂಖ್ಯೆಯಲ್ಲಿ ಕೂಡ ಏರಿಕೆಯಾಗಿದೆ.
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 47,421 ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 674 ಆಗಿದೆ. ಸೋಮವಾರ 332 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ 5,972 ಸಕ್ರಿಯ ಪ್ರಕರಣಗಳಿವೆ.
ಬಳ್ಳಾರಿಯಲ್ಲಿ- 320, ಸಂಡೂರು- 141, ಸಿರುಗುಪ್ಪ-47 , ಹೊಸಪೇಟೆ- 150, ಎಚ್.ಬಿ.ಹಳ್ಳಿ- 37 , ಹರಪನಹಳ್ಳಿ- 23, ಹಡಗಲಿ- 41 ಮತ್ತು ಹೊರ ರಾಜ್ಯದಿಂದ ಬಂದ 4, ಹೊರ ಜಿಲ್ಲೆಯಿಂದ ಬಂದ 8 ಜನರಲ್ಲಿ ಸೋಮವಾರ ಸೋಂಕು ಕಾಣಿಸಿಕೊಂಡಿದೆ.