ಕೊವಿಡ್ ನೆಗೆಟಿವ್ ಬಂದಿದ್ದರೂ ಕೊರೊನಾಕ್ಕೆ ಬಲಿಯಾದ ಅವಳಿ ಸಹೋದರರು! - Mahanayaka
4:02 AM Wednesday 11 - December 2024

ಕೊವಿಡ್ ನೆಗೆಟಿವ್ ಬಂದಿದ್ದರೂ ಕೊರೊನಾಕ್ಕೆ ಬಲಿಯಾದ ಅವಳಿ ಸಹೋದರರು!

brothers
18/05/2021

ಲಕ್ನೋಕೊವಿಡ್ ನೆಗೆಟಿವ್ ಬಂದಿದ್ದರೂ ಅವಳಿ ಸಹೋದರರಿಬ್ಬರು ತೀವ್ರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ ಘಟನೆ  ಉತ್ತರಪ್ರದೇಶದಲ್ಲಿ ನಡೆದಿದ್ದುಕಳೆದ ಏಪ್ರಿಲ್ 23ರಂದು 24 ವರ್ಷ ವಯಸ್ಸಿಗೆ ಕಾಲಿಟ್ಟಿದ್ದ ಅವಳಿ ಸಹೋದರರು ಬಲಿಯಾಗಿದ್ದಾರೆ.

ಜೋಫ್ರೆಡ್ ವರ್ಗೀಸ್ ಗ್ರೆಗೊರಿ ಮತ್ತು ರಾಲ್ಫ್ರೆಡ್ ಜಾರ್ಜ್ ಗ್ರೆಗೊರಿ ಮೃತ ಅವಳಿ ಸಹೋದರರಾಗಿದ್ದು,ಮೇ 10ರಂದು ಇಬ್ಬರಿಗೂ ಕೊವಿಡ್ ನೆಗೆಟಿವ್ ಬಂದಿತ್ತು.  ಮೇ 13ರಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತುಅದೇ ದಿನ ರಾತ್ರಿ 11 ಗಂಟೆಗೆ ಓರ್ವ ಸಹೋದರ ಮೃತಪಟ್ಟಿದ್ದು, ಮೇ 14ರಂದು ಮತ್ತೋರ್ವ ಸಹೋದರ ಸಾವನ್ನಪ್ಪಿದ್ದಾನೆ.

ಇನ್ನೂ ಅವಳಿ ಸಹೋದರರ ಅಣ್ಣನಿಗೂ ಕೊರೊನಾ ಪಾಸಿಟಿವ್ ಬಂದಿದೆ. ಕುಟುಂಬದಲ್ಲೀಗ ಉಳಿದಿರುವುದು ಕೇವಲ ಮೂವರು ಮಾತ್ರವೇ ಆಗಿದ್ದಾರೆ. ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದ ಸಹೋದರರು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಚಿಕಿತ್ಸೆ ಪಡೆದ ಬಳಿಕ ಅವರಿಗೆ ನೆಗೆಟಿವ್ ಬಂದಿದ್ದರೂ, ಉಸಿರಾಟದ ತೊಂದರೆಯಿಂದ ಅವರು ತೀವ್ರವಾಗಿ ಬಳಲಿದ್ದರು. ಇದೀಗ ಅವರು ಮೃತಪಟ್ಟಿದ್ದಾರೆ.

ಇತ್ತೀಚಿನ ಸುದ್ದಿ