ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭ - Mahanayaka

ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭ

new year
31/12/2022

  • ವಿವೇಕ್ ಕೆ., ಮೈಸೂರು

ಹೊಸ ವರ್ಷ 2023ಯನ್ನು ಸ್ವಾಗತಿಸಲು ಇಡೀ ಜಗತ್ತು ಸಿದ್ಧವಾಗಿದೆ. ಇದೀಗ ಹೊಸ ವರ್ಷ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.  ಹಳೆಯ ಕಹಿ ನೆನಪುಗಳು ಮರೆಯಾಗಿ ಹೊಸ ವರ್ಷದ ಸಂಭ್ರಮದಲ್ಲಿ ಜನ ತೇಲಾಡಲು ಸಜ್ಜಾಗಿದ್ದಾರೆ.


Provided by

ಕಳೆದ ವರ್ಷದಲ್ಲಿ ಜನರು ಕೊವಿಡ್ ನಿಂದಾಗಿ ಪ್ರಾಣ ಮಾತ್ರವಲ್ಲ ಸಂತಸ, ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದರು. ಈ ಬಾರಿ ಕೊವಿಡ್ ಬಗ್ಗೆ ಎಚ್ಚರಿಕೆ ವಹಿಸಬೇಕು ಎನ್ನುವ ಸರ್ಕಾರದ ಸೂಚನೆಗಳನ್ನು ಅನುಸರಿಸಿಕೊಂಡು ಹೊಸ ವರ್ಷಾಚರಣೆಗೆ ಜನರು ಸಿದ್ಧವಾಗಿದ್ದಾರೆ.

2021 ಹಾಗೂ 2022ರಲ್ಲಿ  ಹೊಸ ವರ್ಷದ ಸಂಭ್ರಮಾಚರಣೆಗೆ ನಿರ್ಬಂಧ ಹೇರಲಾಗಿತ್ತು. ಕೊವಿಡ್ ಗೆ ಸಂಬಂಧಿಸಿದಂತೆ ಅಂದು ವಿಧಿಸಲಾಗಿದ್ದ  ಟಫ್ ರೂಲ್ಸ್ ಗಳು ಜನರ ಸಂತೋಷಗಳನ್ನು ಕಿತ್ತುಕೊಂಡಿತ್ತು. ಈ ಬಾರಿಯೂ ಟಫ್ ರೂಲ್ಸ್ ಗಳನ್ನು ಜಾರಿ ಮಾಡಲಾಗುವುದು ಎನ್ನಲಾಗಿತ್ತು. ಆದರೆ, ಕೊವಿಡ್ ವಿಚಾರಗಳ ಬಗ್ಗೆ ಜನರು ಹೆಚ್ಚಿನ ಉತ್ಸಾಹ ತೋರದ ಹಿನ್ನೆಲೆಯಲ್ಲಿ ಹೆಚ್ಚಿನ ನಿರ್ಬಂಧಗಳನ್ನು ಹೇರಿಲ್ಲ ಅನ್ನೋ ಮಾತುಗಳು ಕೇಳಿ ಬಂದಿವೆ.


Provided by

ಹೊಸ ವರ್ಷಾಚರಣೆ ಸಂತಸದ ದಿನವಾಗಬೇಕಿದ್ದರೆ, ಅವಘಡ ರಹಿತ ಆಚರಣೆಯಲ್ಲಿ ಜನರು ತೊಡಗಬೇಕು. ಮದ್ಯ ಸೇವನೆಯೊಂದೇ ಸಂಭ್ರಮಾಚರಣೆ ಅಲ್ಲ, ಮದ್ಯ ಸೇವಿಸಿ ರಸ್ತೆಯಲ್ಲಿ ವೇಗವಾಗಿ ವಾಹನ ಓಡಿಸಿ ಇನ್ನೊಬ್ಬರ ಕುಟುಂಬದ ಸಂತಸವನ್ನು ಕಿತ್ತುಕೊಳ್ಳದಿರಿ, ಹೊಸ ವರ್ಷಾಚರಣೆ ಹೊಸ ಬದುಕಿನ ಸ್ವಾಗತಕ್ಕೆ ಮುಡಿಪಾಗಿರಲಿ, ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ 2023ರನ್ನು ಅದ್ದೂರಿಯಾಗಿ ಬರ ಮಾಡಿಕೊಳ್ಳೋಣ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ