ಪಾಲಾರ್ ಸಿನಿಮಾ ಬಿಡುಗಡೆಗೆ ಕ್ಷಣಗಣನೆ: ಶೋಷಿತರ ಕಥೆಯ ಚಿತ್ರ ಯಶಸ್ವಿಯಾಗುತ್ತಾ?

ಇತ್ತೀಚೆಗೆ ಸಾಮಾಜಿಕ ಜಾಲತಾಣ ಹಾಗೂ ಕನ್ನಡ ಚಿತ್ರರಂಗದ ಗಮನ ಸೆಳೆಯುತ್ತಿರುವ ಪಾಲಾರ್ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಚಿತ್ರದ ಪ್ರೀಮಿಯರ್ ಶೋಗಳು ಯಶಸ್ವಿಯಾಗಿದ್ದು, ಚಿತ್ರ ವೀಕ್ಷಿಸಿದವರು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 24ರಂದು ಚಿತ್ರಮಂದಿರಕ್ಕೆ ಕಾಲಿಡಲಿರುವ ಪಾಲಾರ್ ಚಿತ್ರ ನೋಡಲು ಸಾಕಷ್ಟು ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಕಲಾತ್ಮಕ ಚಿತ್ರಗಳು ಹೆಚ್ಚು ಯಶಸ್ವಿಯಾಗುತ್ತಿದೆ. ನಮ್ಮ ನೆಲಮೂಲದ ಕಥೆಗಳನ್ನು ಜನರು ಹೆಚ್ಚು ಆಕರ್ಷಿತರಾಗಿ ನೋಡುತ್ತಿದ್ದಾರೆ. ಇಂತಹ ಕಥೆಗಳ ಸಾಲಿನಲ್ಲಿ ಪಾಲಾರ್ ಚಿತ್ರ ಕೂಡ ಸ್ಥಾನ ಪಡೆಯಲಿದೆ ಅನ್ನೋ ಮಾತುಗಳು ಕೇಳಿ ಬಂದಿವೆ.
ಶೋಷಿತರು ಮೇಲ್ವರ್ಗಗಳ ರಾಜಕೀಯ, ಆರ್ಥಿಕ ಸಾಮರ್ಥ್ಯದ ನಡುವೆ ಸಿಲುಕಿ ಮತ್ತಷ್ಟು ಶೋಷಣೆಗೊಳಪಡುತ್ತಿರುವ ದುಸ್ಥಿತಿಗಳು ಇಂದಿಗೂ ನಮ್ಮ ಸಮಾಜದಲ್ಲಿದೆ. ಅಂತಹ ಘಟನೆಯೊಂದನ್ನು ಪಾಲಾರ್ ಚಿತ್ರ ಹೇಳಲು ಹೊರಟಿದೆ. ಈ ಚಿತ್ರ ಯಶಸ್ವಿಯಾದರೆ ಮುಂದೆ ಇನ್ನಷ್ಟು ಇಂತಹ ಕಥೆಗಳ ಚಿತ್ರಗಳು ತೆರೆಯ ಮೇಲೆ ಬರಲು ಸಾಧ್ಯವಾಗುತ್ತದೆ. ಇದರಿಂದ ಸಾಮಾಜಿಕವಾಗಿಯೂ ಸಾಕಷ್ಟು ಬದಲಾವಣೆಯಾಗುತ್ತದೆ. ಶೋಷಿತರು ಜಾಗೃತರಾದರೆ, ಶೋಷಣೆ ಮಾಡುತ್ತಿರುವವರ ಮನಃಪರಿವರ್ತನೆಯೂ ಆಗುತ್ತದೆ ಅನ್ನೋದು ಸಿನಿಮಾ ವಿಶ್ಲೇಷಕರ ಮಾತುಗಳಾಗಿವೆ.
ಪಾಲಾರ್ ಚಿತ್ರವನ್ನು ನೋಡಲು ನೀವು ಇಷ್ಟಪಡುತ್ತೀರಾದರೆ, Book My Show app ಮುಖಾಂತರ ಟಿಕೆಟ್ ಬುಕ್ ಮಾಡಿಕೊಳ್ಳಬಹುದು https://in.bookmyshow.com/bengaluru/movies/paalaar-kannada/ET00322027 ಈ ಲಿಂಕ್ ಗೆ ಕ್ಲಿಕ್ ಮಾಡಿ, ನಿಮ್ಮ ಮೆಚ್ಚಿನ ಸಿನಿಮಾ ಥಿಯೇಟರ್ ಗಳಲ್ಲಿ ನಿಮ್ಮ ಟಿಕೆಟ್ ನ್ನು ಕಾದಿರಿಸಿಕೊಳ್ಳಿ ಎಂದು ಚಿತ್ರತಂಡ ಮನವಿ ಮಾಡಿದೆ.
ಇನ್ನೂ ಈ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಜೀವಾ ನವೀನ್, ಕನ್ನಡ ಚಿತ್ರರಂಗದಲ್ಲಿ ದಲಿತರ ಬಗ್ಗೆ, ಮೂಲ ನಿವಾಸಿಗಳ, ಶೋಷಿತರ ಕಥೆಗಳ ಸಿನಿಮಾಗಳು ಬರುವುದೇ ಕಷ್ಟ. ಅಂತಹದರಲ್ಲಿ ಪಾಲಾರ್ ಸಿನಿಮಾ ಈಗಾಗಲೇ ಯಶಸ್ವಿಯಾಗಿ ಪ್ರೀಮಿಯರ್ ಶೋ ಆಯೋಜನೆ ಮಾಡಿ ಗೆದ್ದಾಗಿದೆ. ಈಗ ನಾಳೆಯಿಂದ (24.02.2023) ರಾಜ್ಯಾದ್ಯಂತ ಕೆಲವೊಂದು ಚಿತ್ರಮಂದಿರಗಳಲ್ಲಿ ಪಾಲಾರ್ ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲರೂ ಈ ಸಿನಿಮಾವನ್ನು ನೋಡಬೇಕು. ಈ ಪಾಲಾರ್ ಸಿನಿಮಾ ಗೆಲ್ಲಲೇ ಬೇಕು. ಈ ಸಿನಿಮಾ ಮುಂದೆ ಬರುವ ನೆಲದ ಮೂಲದ ಕಥೆಗಳಿಗೆ ಮಾದರಿಯಾಗಲಿ ಎಂದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw