ಕಾರಿನ ಬದಲು ಅಡುಗೆ ಪಾತ್ರೆಯಲ್ಲಿ ಕಲ್ಯಾಣ ಮಂಟಪಕ್ಕೆ ಬಂದ ವಧುವರ!
ಆಲಪ್ಪುಝ: ಕೇರಳದಲ್ಲಿ(kerala floods) ಕಳೆದೆರಡು ತಿಂಗಳಿನಿಂದ ಸುರಿದ ಮಳೆಯಿಂದಾಗಿ ಸಾಕಷ್ಟು ಸಾವು ನೋವುಗಳು ನಡೆದಿವೆ. ಈ ಮಳೆಯ ನಡುವೆಯೂ ಶುಭ ವಿವಾಹವೊಂದು ನಡೆದಿದ್ದು, ಮಳೆಯಿಂದಾಗಿ ರಸ್ತೆ ಇಡೀ ನೀರು ಆವರಿಸಿದ್ದು, ಪರಿಣಾಮವಾಗಿ ವಧುವರರು ಕಾರಿನಲ್ಲಿ ಪ್ರಯಾಣಿಸಲು ಸಾಧ್ಯವಾಗದೇ 500 ಮೀಟರ್ ವರೆಗೆ ಹಂಡೆ(ಸಾಂಪ್ರದಾಯಿಕ ತಾಮ್ರದ ಪಾತ್ರೆ)ಯಲ್ಲಿ ಪ್ರಯಾಣಿಸಿದ್ದಾರೆ.
ಆಲಪ್ಪುಝದ ಆಕಾಶ್ ಹಾಗೂ ಐಶ್ವರ್ಯ ಜೋಡಿಗೆ ತಮ್ಮ ಮದುವೆ ದಿನದಲ್ಲಿ ಮರೆಯಲಾಗದ ಘಟನೆ ಇದಾಗಿದೆ. ಭಾನುವಾರ ಮಧ್ಯಾಹ್ನದವರೆಗೆ ಧಾರಾಕಾರ ಮಳೆ ಸುರಿದಿದ್ದು, ಪರಿಣಾಮವಾಗಿ ಆಳಪ್ಪುಝ ಕುಟ್ಟನಾಡ್ ಪ್ರದೇಶವು ತೀವ್ರ ಮಳೆಯಿಂದಾಗಿ ಮುಳುಗಿದ್ದು, ಈ ಪ್ರದೇಶದ ರಸ್ತೆಗಳು ಸೋಮವಾರ ಸಂಪೂರ್ಣವಾಗಿ ಮುಳುಗಿದೆ. ಹೀಗಾಗಿ ವಧುವರರು ಇಲ್ಲಿನ ದೇವಸ್ಥಾನದ ಕಲ್ಯಾಣ ಮಂಟಪಕ್ಕೆ ಕಾರಿನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ವಧುವರರಿಬ್ಬರು ಕೂಡ ಒಂದೇ ಪ್ರದೇಶದವರಾಗಿದ್ದಾರೆ. ಹೀಗಾಗಿ ಇಲ್ಲಿನ ತಕಜಿಯ ದೇವಸ್ಥಾನದ ಕಲ್ಯಾಣ ಮಂಟಪಕ್ಕೆ ಇಬ್ಬರನ್ನು ಕೂಡ ಸಂಬಂಧಿಕರು ಪಾತ್ರೆಯಲ್ಲಿ ಕೂರಿಸಿ, ಮಂಟಪಕ್ಕೆ ತಳ್ಳಿಕೊಂಡು ಹೋಗಿದ್ದಾರೆ. ಅನಿರೀಕ್ಷಿತ ಮಳೆಯಿಂದಾಗಿ ಕೇರಳದಲ್ಲಿ ಜನ ಜೀವನ ಅಸ್ತವ್ಯಸ್ಥವಾಗಿದೆ. ಮಳೆಯಿಂದಾಗಿ ನೂರಾರು ಸಂಕಷ್ಟದ ಕಥೆಗಳು ಇದೀಗ ಬಯಲಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ದೈತ್ಯ ಹೆಬ್ಬಾವನ್ನು ಕ್ರೇನ್ ನಲ್ಲಿ ಎತ್ತುತ್ತಿರುವ ವಿಡಿಯೋ ವೈರಲ್
ದಕ್ಷಿಣ ಕನ್ನಡ: ನೇಣು ಬಿಗಿದುಕೊಂಡು ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಪಡೆದು ಮನೆಗೆ ಬಂದ ಬಳಿಕ ಸಾವು!
ಉಪ ಚುನಾವಣೆ ಮುಗಿದ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ್ ಬೊಮ್ಮಾಯಿ
KSRTCಯಲ್ಲಿ ಕೆಲಸದ ಆಫರ್ ನೀಡಿ 500 ಮಂದಿಯನ್ನು ವಂಚಿಸಿದ ಇಬ್ಬರು ಅರೆಸ್ಟ್