ನ್ಯಾಯಾಲಯದ ಆವರಣದಲ್ಲಿ ಗುಂಡಿನ ದಾಳಿ: ಗ್ಯಾಂಗ್ ಸ್ಟಾರ್ ಜಿತೇಂದರ್ ಗೋಗಿ ಸಹಿತ ನಾಲ್ವರು ಸಾವು
ನವದೆಹಲಿ: ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿಯೇ ನಡೆದ ಗುಂಡಿನ ದಾಳಿಯಲ್ಲಿ ಗ್ಯಾಂಗ್ ಸ್ಟಾರ್ ಜಿತೇಂದರ್ ಗೋಗಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, “ಟಿಲ್ಲು’ ಗ್ಯಾಂಗ್ ಗೆ ಸೇರಿದ ನಾಲ್ವರನ್ನು ಹತ್ಯೆ ಮಾಡಲಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ಸ್ಪಷ್ಟಪಡಿಸಿದ್ದಾರೆ.
ಕಳೆದ ಏಪ್ರಿಲ್ ಮಹಾರಾಷ್ಟ್ರ ಸಂಘಟಿತ ಅಪರಾಧ ಕಾಯ್ದೆ(MCOCA) ಅಡಿಯಲ್ಲಿ ದೆಹಲಿ ಪೊಲೀಸ್ ನ ವಿಶೇಷ ಪಡೆ ಜಿತೇಂದರ್ ಗೋಗಿಯನ್ನು ಬಂಧಿಸಿತ್ತು. ಸುಲಿಗೆ, ದರೋಡೆ, ಕಾರುಗಳ್ಳತನ ಮತ್ತು ದರೋಡೆಗಳ ಜೊತೆಗೆ ಕೊಲೆ ಮತ್ತು ಕೊಲೆ ಯತ್ನದ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಜಿತೇಂದರ್ ಗೋಗಿಯನ್ನು ನ್ಯಾಯಾಲಯಕ್ಕೆ ಕರೆತಂದ ವೇಳೆ ವಕೀಲರ ಸಮವಸ್ತ್ರದಲ್ಲಿದ್ದ ಇಬ್ಬರು ದಾಳಿಕೋರರು ನ್ಯಾಯಾಲಯದಲ್ಲಿ ಗೋಗಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿದಾಳಿ ನಡೆಸಿ ದಾಳಿ ಕೋರರನ್ನು ಹೊಡೆದುರುಳಿಸಿದ್ದಾರೆ ಎಂದು ರೋಹಿಣಿ ಡಿಸಿಪಿ ಪ್ರಣವ್ ತಾಯಲ್ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ವಿಧಾನಮಂಡಲ ಅಧಿವೇಶನದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ
ಬೆಂಗಳೂರಿನಲ್ಲಿ ಮತ್ತೊಂದು ಭಾರೀ ಅಗ್ನಿ ದುರಂತ | ಕೆಮಿಕಲ್ ಫ್ಯಾಕ್ಟರಿಯ ಬಾಯ್ಲರ್ ಸ್ಫೋಟ
ಬಿಜೆಪಿ ಚುನಾವಣೆಗೆ ಮಾತ್ರ ಹಿಂದುಳಿದ ವರ್ಗಗಳನ್ನು ಬಳಸುತ್ತಿರುವುದು ಬಯಲಾಗಿದೆ | ಮಾಯಾವತಿ ಆಕ್ರೋಶ
ತಾತಾ ಆದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ | ದೇವೇಗೌಡ್ರ ಮನೆಯಲ್ಲಿ ಸಂಭ್ರಮ
ಪ್ರತಿಭಟನಾಕಾರನ ದೇಹದ ಮೇಲೆ ಹಾರಿಹಾರಿ ಬಿದ್ದಿದ್ದ ಪತ್ರಕರ್ತ ಅರೆಸ್ಟ್
ಕಬ್ಬಿನ ಗದ್ದೆಯಲ್ಲಿ ಬೆತ್ತಲೆಯಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಬಾಲಕಿ!
ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ: ಗ್ಯಾಸ್ ಸಿಲಿಂಡರ್ ಸಿಡಿದು ಮೂವರು ಸಾವು
ಪೂಜೆ ಮುಗಿಸಿ ಮನೆಗೆ ಹೋಗುತ್ತಿದ್ದ ಅರ್ಚಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ!