ಸಂಭಾಲ್ ನ ಜಾಮಾ ಮಸೀದಿಯ ಸರ್ವೇಕ್ಷಣೆಗೆ ಕೋರ್ಟ್ ಆದೇಶ
ಉತ್ತರ ಪ್ರದೇಶದ ಸಂಭಾಲ್ ನಗರದ ಹೃದಯಭಾಗದಲ್ಲಿರುವ ಜಾಮಾ ಮಸೀದಿಯ ಸ್ಥಳವು ಮೂಲತಃ ಹಿಂದೂ ಧರ್ಮದ ಪ್ರಾಚೀನ ದೇವಾಲಯದ ಸ್ಥಳವಾಗಿದೆ ಎಂದು ದೂರಲಾಗಿದೆ. ಈ ಕುರಿತು ವಿಚಾರಣೆ ನಡೆಸಿದ ಯುಪಿ ಹೈಕೋರ್ಟ್, ಸಮೀಕ್ಷೆಗೆ ಆದೇಶ ನೀಡಿದೆ.
ಅರ್ಜಿದಾರರೂ ಆಗಿರುವ ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್, ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ, ಮಸೀದಿ ಸಮಿತಿ ಮತ್ತು ಸಂಭಾಲ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅವರನ್ನು ಅರ್ಜಿಯಲ್ಲಿ ಕಕ್ಷಿದಾರರನ್ನಾಗಿ ಮಾಡಲಾಗಿದೆ ಎಂದು ಹೇಳಿದರು.
ನ್ಯಾಯಾಲಯದ ಆದೇಶದ ಪ್ರಕಾರ, ಅಡ್ವೊಕೇಟ್ ಕಮಿಷನರ್ ಸಮೀಕ್ಷೆ ನಡೆಸಲಿದ್ದು, ಪ್ರಕ್ರಿಯೆಯ ಸಮಯದಲ್ಲಿ ಎರಡೂ ಪಕ್ಷಗಳು ಹಾಜರಿರುತ್ತಾರೆ ಎಂದು ಸಂಭಾಲ್ ಡಿಎಂ ರಾಜೇಂದ್ರ ಪೆನ್ಸಿಯಾ ಪಿಟಿಐಗೆ ತಿಳಿಸಿದ್ದಾರೆ.
“ನಾವು ಭದ್ರತೆ ಮತ್ತು ರಕ್ಷಣೆಯನ್ನು ಮಾತ್ರ ಒದಗಿಸುತ್ತಿದ್ದೆವು. ಅಡ್ವೊಕೇಟ್ ಕಮಿಷನರ್ ಸಮೀಕ್ಷೆ ನಡೆಸಲಿದ್ದು, ಅವರು ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದೀಗ ಸಮೀಕ್ಷೆ ಕಾರ್ಯ ಪೂರ್ಣಗೊಂಡ ಬಳಿಕ ಅಗತ್ಯವಿದ್ದರೆ ತೀರ್ಪನ್ನು ನ್ಯಾಯಾಲಯವು ನಿರ್ಧರಿಸುತ್ತದೆ” ಎಂದು ಡಿಎಂ ಹೇಳಿದರು.
ಮೊಘಲ್ ಚಕ್ರವರ್ತಿ ಬಾಬರ್ 1529 ರಲ್ಲಿ ದೇವಾಲಯವನ್ನು ಭಾಗಶಃ ನೆಲಸಮಗೊಳಿಸಿದರು ಎಂದು ಜೈನ್ ಆರೋಪಿಸಿದ್ದಾರೆ.
“ಕಲ್ಕಿ ಅವತಾರವು ಸಂಭಾಲ್‌ನಲ್ಲಿ ನಡೆಯಲಿದೆ ಎಂದು ನಂಬಲಾಗಿದೆ” ಎಂದು ಜೈನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಇಂದು ಗೌರವಾನ್ವಿತ ಸಿವಿಲ್ ನ್ಯಾಯಾಲಯ ಸಂಭಾಲ್ ನನ್ನ ಅರ್ಜಿಯ ಮೇರೆಗೆ ಹರಿ ಹರ್ ಮಂದಿರ ಎಂದು ಕರೆಯಲ್ಪಡುವ ಸಂಭಾಲ್ ನ ಜಾಮಾ ಮಸೀದಿಯಲ್ಲಿ ಅಡ್ವೊಕೇಟ್ ಕಮಿಷನರ್ ಸಮೀಕ್ಷೆಗೆ ನಿರ್ದೇಶನ ನೀಡಿದೆ” ಎಂದು ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj