ಯುಪಿಯಲ್ಲಿ ಮಸೀದಿ ಧ್ವಂಸ ಆದೇಶವನ್ನು ರದ್ದುಗೊಳಿಸಿದ ಕೋರ್ಟ್

ಉತ್ತರ ಪ್ರದೇಶದ ಘೋರಕ್ ಪುರದಲ್ಲಿರುವ ಅಬುಹುರೈರ ಮಸೀದಿಯನ್ನು ಧ್ವಂಸಗೊಳಿಸಲು ಆದೇಶಿಸಿದ್ದ ಘೋರಕ್ ಪುರ್ ಡೆವೆಲಪ್ ಮೆಂಟ್ ಅಥಾರಿಟಿಯ ಆದೇಶವನ್ನು ಜಿಲ್ಲಾಧಿಕಾರಿ ನ್ಯಾಯಾಲಯವು ರದ್ದುಗೊಳಿಸಿದೆ. ಮಸೀದಿ ಆಡಳಿತ ಸಮಿತಿಯು ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಾದವನ್ನು ಮುಂದಿಡಲು ಅವಕಾಶ ಕೊಡದೆ ಮುಂದಿನ ಯಾವುದೇ ಆದೇಶವನ್ನು ಕೊಡಬಾರದು ಎಂದು ನ್ಯಾಯಾಲಯ ತಾಕೀತು ಮಾಡಿದೆ.
ಇದೇ ವೇಳೆ ಗೊರಖ್ಪೂರ್ ಡೆವಲಪ್ಮೆಂಟ್ ಅಥರಿಟಯ ಆದೇಶಕ್ಕೂ ಮೊದಲೇ ಕಾನೂನು ಬಾಹಿರವೆಂದು ಆರೋಪಿಸಲಾದ ಭಾಗವನ್ನು ಮಸೀದಿಯು ಕೆಡವಿ ಹಾಕಿದೆ. ಮಸೀದಿಯಲ್ಲಿ ಪ್ರತಿದಿನ ಐದು ಬಾರಿ ನಮಾಜ್ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಫೆಬ್ರವರಿ 15 ರಂದು ಅಥಾರಿಟಿ ಆದೇಶ ನೀಡಿದ್ದು ಮಾತ್ರವಲ್ಲ ಮಸೀದಿ ಆಡಳಿತ ಸಮಿತಿಗೆ 15 ದಿನಗಳ ಕಾಲ ಕಾಲಾವಕಾಶವನ್ನು ನೀಡಿತ್ತು. ಈ ಅವಧಿಯೊಳಗೆ ಕಾನೂನುಬಾಹಿರವಾಗಿ ನಿರ್ಮಿಸಲಾದ ಮಸೀದಿಯ ಭಾಗವನ್ನು ಕೆಡವಿ ಹಾಕದಿದ್ದರೆ ನಾವೇ ಧ್ವಂಸಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿತ್ತು. ಈ ನೆಲೆಯಲ್ಲಿ ಮಸೀದಿ ಆಡಳಿತ ಸಮಿತಿಯು ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿತು. ಮಾತ್ರ ಅಲ್ಲ ಈ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಮಸೀದಿ ಆಡಳಿತ ಸಮಿತಿಯು ಎರಡು ಅಂತಸ್ತುಗಳನ್ನು ತೆರವುಗೊಳಿಸುವ ತೀರ್ಮಾನವನ್ನು ಕೈಗೊಂಡಿತಲ್ಲದೆ ಅದರಂತೆ ಕಾರ್ಯಾಚರಿಸಿತು. ಮಸೀದಿಯ ಮಿನಾರವನ್ನು ಮೊದಲ ಅಂತಸ್ತಿನಲ್ಲಿ ಸ್ಥಾಪಿಸಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj