ಕವರ್ ಸಹಿತ ಚಾಕೊಲೇಟ್ ನುಂಗಿದ 1ನೇ ತರಗತಿಯ ಬಾಲಕಿಯ ದಾರುಣ ಸಾವು
ಉಡುಪಿ: ಕವರ್ ಸಹಿತ ಚಾಕೊಲೇಟ್ ನುಂಗಿದ ಬಾಲಕಿಯೋರ್ವಗಳು ಉಸಿರುಗಟ್ಟಿ ಸಾವನನ್ನಪ್ಪಿರುವ ಘಟನೆ ಬೈಂದೂರು ತಾಲೂಕಿನ ಬವಳಾಡಿ ಗ್ರಾಮದಲ್ಲಿ ಸಂಭವಿಸಿದೆ.
1ನೇ ತರಗತಿಯ ಬವಳಾಡಿ ಮೂಲದ ಸಮನ್ವಿ(6) ಮೃತ ಬಾಲಕಿಯಾಗಿದ್ದಾಳೆ. ಉಪ್ಪುಂದದ ಸ್ಥಳೀಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದ ಸಮನ್ವಿ ಶಾಲಾ ಬಸ್ ಗೆ ಕಾಯುತ್ತಿರುವ ವೇಳೆ ಕೈಯಲ್ಲಿದ್ದ ಚಾಕೊಲೇಟ್ ತಿನ್ನಲು ಹೋಗಿ ಕವರ್ ಸಮೇತ ನುಂಗಿದ್ದು, ಪರಿಣಾಮವಾಗಿ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.
ಶಾಲಾ ಸಿಬ್ಬಂದಿ-ಮಕ್ಕಳು ಮರುಕ ವ್ಯಕ್ತಪಡಿಸಿದ್ದು, ಇನ್ನು ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಣಿಪಾಲ್ ಕೆ.ಎಂ.ಸಿ ಆಸ್ಪತ್ರೆಗೆ ಬಾಲಕಿಯ ಮೃತದೇಹ ರವಾನಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಲುಲು ಮಾಲ್ ಶುದ್ಧ ಮಾಡಲು ಬಂದ ಸ್ವಾಮೀಜಿ ಅರೆಸ್ಟ್!
ವಾಹನ ತಪಾಸಣೆ ವೇಳೆ ಮಹಿಳಾ ಎಸ್ ಐ ಮೇಲೆ ವಾಹನ ಹರಿಸಿ ಹತ್ಯೆ