ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿಯಾಗುವ ಸಾಧ್ಯತೆ? | ಸಿಎಂ ಬೊಮ್ಮಾಯಿ ಹೇಳಿದ್ದೇನು?
ಬೆಂಗಳೂರು: ರಾಜ್ಯದಲ್ಲಿ ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಂದಿನ ತೀರ್ಮಾನ ಇಂದು ಸಂಜೆ ಹೊರಬೀಳಲಿದ್ದು, ಲಾಕ್ ಡೌನ್ ಆಗುತ್ತಾ, ಟಫ್ ರೂಲ್ಸ್ ಗಳು ಜಾರಿಯಾಗುತ್ತಾ ಅಥವಾ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಮಾತ್ರವೇ ಜಾರಿಯಲ್ಲಿರುತ್ತಾ ಎಂಬ ಬಗ್ಗೆ ಇಂದು ಸರ್ಕಾರ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಗಳಿವೆ.
ಇಂದು ಮಾಧ್ಯಮಗಳ ಜೊತೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಈ ಸಂಬಂಧ ಮಾತನಾಡಿದ್ದು, ಕೊವಿಡ್ ನಿಯಂತ್ರಣಕ್ಕೆ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ. ಸೋಂಕು ಹೆಚ್ಚಾದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತಲೂ, ಹಿಂದಿನ ಅನುಭವಗಳ ಆಧಾರದ ಮೇಲೆ ಹೀಗಿನಿಂದಲೇ ಕ್ರಮಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
ಜನರಿಗೆ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ. ಈ ನಿಟ್ಟಿನಲ್ಲಿ ಸಂಜೆ ತಜ್ಞರ ಸಭೆ ನಡೆಸಿ ವೈಜ್ಞಾನಿಕವಾಗಿ ಚಿಂತನೆ ನಡೆಸಿ ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚಿಸುತ್ತೇವೆ ಎಂದ ಸಿಎಂ, ಕೊವಿಡ್ ನಿಯಂತ್ರಣಕ್ಕೆ ಹಲವು ಬದಲಾವಣೆಗಳನ್ನು ತರಲು ಅವಕಾಶವಿದೆ. ಮೂರನೇ ಅಲೆ ಆತಂಕ ಇರುವುದರಿಂದಾಗಿ ಈಗಲೇ ಕಟ್ಟುನಿಟ್ಟಿನ ಕ್ರಮದ ಅಗತ್ಯವಿದೆ ಎಂದು ಅವರು ಹೇಳಿದರು.
ಇನ್ನಷ್ಟು ಸುದ್ದಿಗಳು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ: ಇನ್ನೆರಡು ದಿನ ಏನೇನು ಇರಲಿದೆ?
ಜಿಯೋ ಫೋನ್ ಸ್ಫೋಟ: ಪ್ಯಾಂಟ್ ನ ಜೇಬಿನಲ್ಲಿದ್ದಾಗಲೇ ಏಕಾಏಕಿ ಸಿಡಿದ ಮೊಬೈಲ್
ಮುಸ್ಲಿಮ್ ಕಲಾವಿದರಿಂದ ಮೆಹೆಂದಿ ಹಚ್ಚಿಸಿಕೊಳ್ಳಬಾರದು | ಮೆಹೆಂದಿ ಸ್ಟಾಲ್ ಗೆ ಕರ್ಣಿಸೇನೆ ದಾಳಿ
ತನಗೆ ಕಚ್ಚಿದ ಹಾವನ್ನು ಕಚ್ಚಿ ಕಚ್ಚಿಯೇ ಕೊಂದ ಭೂಪ: ಅಷ್ಟಕ್ಕೂ ಅಲ್ಲಿ ನಡೆದ್ದದ್ದೇನು ಗೊತ್ತಾ?
ಎನ್.ಮಹೇಶ್ ಗೆ ಬಿಎಸ್ ಪಿಯಿಂದ ಅನ್ಯಾಯ ಆಗಿಲ್ಲ | ಬಿಎಸ್ ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ
ಕೋಟ್ಯಂತರ ರೂ. ವಂಚನೆ ಪ್ರಕರಣ: ನಟಿ ಶಿಲ್ಪಾ ಶೆಟ್ಟಿಗೆ ಲಕ್ನೋ ಪೊಲೀಸರಿಂದ ನೋಟಿಸ್