ಕೊವಿಡ್ ಲಸಿಕೆ ಪಡೆಯುವುದರಿಂದ ಏನಾಗುತ್ತೆ ಗೊತ್ತಾ? | ಕೇಂದ್ರ ಸರ್ಕಾರವೇ ನೀಡಿದ ಆ ಮಾಹಿತಿ ಏನು? - Mahanayaka
8:02 PM Wednesday 11 - December 2024

ಕೊವಿಡ್ ಲಸಿಕೆ ಪಡೆಯುವುದರಿಂದ ಏನಾಗುತ್ತೆ ಗೊತ್ತಾ? | ಕೇಂದ್ರ ಸರ್ಕಾರವೇ ನೀಡಿದ ಆ ಮಾಹಿತಿ ಏನು?

covid vaccine
18/06/2021

ನವದೆಹಲಿ: ವ್ಯಾಕ್ಸಿನೇಷನ್ ನಂತರ ಕೋವಿಡ್ ಸೋಂಕು ತಗುಲಿ, ಆಮ್ಲಜನಕದ ಅವಶ್ಯಕತೆ ಶೇಕಡಾ 8 ಕ್ಕೆ ಇಳಿದ ನಂತರವೂ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳು ಶೇಕಡಾ 75-80 ರಷ್ಟು ಕಡಿಮೆಯಾಗಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ಮೇ 7 ರಂದು ಗರಿಷ್ಠ ಪ್ರಕರಣಗಳು ವರದಿಯಾದಾಗಿನಿಂದ ದೈನಂದಿನ ಹೊಸ ಪ್ರಕರಣಗಳಲ್ಲಿ ಬಹುತೇಕ ಶೇಕಡಾ 85 ರಷ್ಟು ಕುಸಿತ ಕಂಡುಬಂದಿದೆ. ಮೇ 10 ರಂದು ಗರಿಷ್ಠ ವರದಿ ನಂತರ ಒಟ್ಟು ಸಕ್ರಿಯ ಕೋವಿಡ್-19 ಪ್ರಕರಣಗಳಲ್ಲಿ ಶೇಕಡಾ 78.6 ರಷ್ಟು ಕುಸಿತ ದಾಖಲಾಗಿದೆ ಎಂದು ಹೇಳಿದೆ.

ಸಾಪ್ತಾಹಿಕ ಪ್ರಕರಣದ ಪಾಸಿಟಿವಿಟಿ ದರದಲ್ಲಿ ಶೇಕಡಾ 81 ರಷ್ಟು ತೀವ್ರ ಕುಸಿತ ಕಂಡುಬಂದಿದೆ.ಇದು ಏಪ್ರಿಲ್ 30- ಮೇ 6 ನಡುವೆ ಶೇ. 21.6 ರಷ್ಟಿತ್ತು ಎಂದು ಸರ್ಕಾರ ತಿಳಿಸಿದೆ. 513 ಜಿಲ್ಲೆಗಳಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಶೇ.5ಕ್ಕಿಂತಲೂ ಕಡಿಮೆಯಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

 

ಇತ್ತೀಚಿನ ಸುದ್ದಿ