ಕೊವಿಡ್ ಸೋಂಕಿಗೊಳಗಾದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಚಲನಶೀಲತೆ  ಕುಸಿತ! - Mahanayaka
6:12 AM Friday 20 - September 2024

ಕೊವಿಡ್ ಸೋಂಕಿಗೊಳಗಾದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಚಲನಶೀಲತೆ  ಕುಸಿತ!

sperm
24/12/2021

ಕೊವಿಡ್ ಸೋಂಕಿಗೆ ಒಳಗಾಗಿರುವ 35ರಿಂದ 52 ವರ್ಷ ವಯಸ್ಸಿನ ಪುರುಷರಲ್ಲಿ ಹೊಸ ಬದಲಾವಣೆ ಕಂಡು ಬಂದಿದ್ದು, ಸೋಂಕಿಗೆ ಒಳಗಾದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹಾಗೂ ಚಲನಶೀಲತೆ  ಕಡಿಮೆಯಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಫರ್ಟಿಲಿಟಿ ಮತ್ತು ಸ್ಟೆರಿಲಿಟಿ ಜರ್ನಲ್​ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ವಿಷಯ ತಿಳಿದುಬಂದಿದೆ. ಕೊರೋನಾದಿಂದ ಗುಣಮುಖರಾಗಿ 52 ದಿನಗಳ ನಂತರ 35 ವರ್ಷ ವಯಸ್ಸಿನ 120 ಪುರುಷರಿಂದ ಮಾದರಿಗಳನ್ನು ಸಂಗ್ರಹಿಸಿ  ಬೆಲ್ಜಿಯಂ ಸಂಶೋಧಕರು ಅಧ್ಯಯನ ಕೈಗೊಂಡಿದ್ದರು.  ಕೊರೋನಾ ಬಳಿಕ ವೀರ್ಯದ ಗುಣಮಟ್ಟವು ಸುಧಾರಿಸಿದ್ದು ಕಂಡುಬಂದಿದೆ. ಆದರೆ 51 ದಿನಗಳ ಬಳಿಕ ವೀರ್ಯದ ಚಲನೆಯು 37 ಪ್ರತಿಶತದಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ.

ಕೋವಿಡ್ ಸೋಂಕಿಗೆ ಒಳಗಾದ ಒಂದು ತಿಂಗಳಲ್ಲಿ 31 ಪುರುಷರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ವೀರ್ಯಾಣು‌ ಸಂಖ್ಯೆ ಹಾಗೂ ಚಲನಶೀಲತೆ ಒಬ್ಬೊಬ್ಬರಲ್ಲಿ ಒಂದೊಂದು ಬಗೆಯಲ್ಲಿ ವ್ಯತ್ಯಾಸವಾಗಿರುವುದು ಕಂಡುಬಂದಿದೆ. 52 ಜನರ ಪೈಕಿ 34 ಜನರ ವೀರ್ಯವನ್ನು ಎರಡು ತಿಂಗಳ‌ ಬಳಿಕ ಸಂಗ್ರಹಿಸಿ ಪರೀಕ್ಷಿಸಿದಾಗ ವೀರ್ಯಾಣುಗಳ ಸಂಖ್ಯೆ ಶೇ.6 ಹಾಗೂ ವೀರ್ಯಾಣು ಚಲನಶೀಲತೆ ಶೇ.28ರಷ್ಟು ನಾಶವಾಗಿರುವುದು ಕಂಡುಬಂದಿದೆ ಎಂದು ವರದಿ ಹೇಳಿದೆ.


Provided by

ಮೂರು ತಿಂಗಳಲ್ಲಿ ವೀರ್ಯಾಣುಗಳ ಸಂಖ್ಯೆ ಹಾಗೂ ಚಲನಶೀಲತೆಯಲ್ಲಿ ಸಹಜ ಸ್ಥಿತಿಗೆ ಬರುತ್ತದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುತ್ತಿದ್ದು, ಸಮರ್ಪಕ‌ ಅಧ್ಯಯನದ ಬಳಿಕ ಈ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ ಎಂದು ತಜ್ಞರು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಫುಡ್​ ಡೆಲಿವರಿ ವಿಳಂಬ: ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ

ಜಮ್ಮು-ಕಾಶ್ಮೀರದ ಅನಂತ್‌ ನಾಗ್‌ನಲ್ಲಿ ಎನ್‌ ಕೌಂಟರ್: ಓರ್ವ ಉಗ್ರನ ಹತ್ಯೆ

ಮೀನುಗಾರನನ್ನು ತಲೆಕೆಳಗಾಗಿ ನೇತು ಹಾಕಿ ಹಲ್ಲೆ: ಆರು ಮಂದಿ ಆರೋಪಿಗಳು ಅರೆಸ್ಟ್

22 ವರ್ಷವಾಗದೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಬಾರದು | ಶೋಭಾ ಕರಂದ್ಲಾಜೆ

ಮತಾಂತರ ನಿಷೇಧ: ತಿದ್ದ ಬೇಕಿರುವುದು ಜಾತಿ ಅಸಮಾನತೆಯನ್ನು, ಸಂವಿಧಾನವನ್ನಲ್ಲ!

ಅಂಬೇಡ್ಕರ್ ಯಾಕೆ ಬೌದ್ಧ ಧರ್ಮ ಸ್ವೀಕರಿಸಿದರು? | ಸದನದಲ್ಲಿ ನಡೆಯಿತು ಭಾರೀ ಚರ್ಚೆ!

ಇತ್ತೀಚಿನ ಸುದ್ದಿ