“ಕೊವಿಡ್ ಡ್ಯೂಟಿ” ಹೆಸರಿನ ಕಾರಿನಲ್ಲಿ ಅರ್ಚಕರ ಬಿಂದಾಸ್ ಪ್ರಯಾಣ | ಪೊಲೀಸರಿಗೆ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ?
ವಿಜಯಪುರ: ಕೊರೊನಾದಿಂದ ಇಡೀ ರಾಜ್ಯದ ಜನರು ತಮ್ಮ ಜೀವನೋಪಾಯಗಳನ್ನು ಕಳೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕೊವಿಡ್ ಡ್ಯೂಟಿ ಬೋರ್ಡ್ ಹಾಕಲಾಗಿದ್ದ ಕಾರಿನಲ್ಲಿ ಇಬ್ಬರು ಅರ್ಚಕರು ತೆರಳಿದ್ದು, ಇವರ ಕಾರನ್ನು ಪೊಲೀಸರು ಸೀಝ್ ಮಾಡಿದ್ದರೆ.
ಕಾರಿನಲ್ಲಿ “ಅರ್ಜೆಂಟ್ ಕೊವಿಡ್ ಡ್ಯೂಟಿ” ಎಂದು ಬರೆಯಲಾಗಿತ್ತು. ಈ ವೇಳೆ ಕರ್ತವ್ಯ ನಿರತ ಪೊಲೀಸರು ಕಾರನ್ನು ವಿಜಯಪುರ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ನಿನ್ನೆ ಬೆಳಗ್ಗೆ ನಿಲ್ಲಿಸಿದ್ದಾರೆ. ಒಂದೆಡೆ ಕೊರೊನಾ ಲಾಕ್ ಡೌನ್ ಹೆಸರಿನಲ್ಲಿ ಸಾರ್ವಜನಿಕರನ್ನು ಹಿಗ್ಗಾಮುಗ್ಗಾ ಥಳಿಸಲಾಗಿದ್ದರೆ, ಇತ್ತ ಇಬ್ಬರು ಅರ್ಚಕರು ಕೊವಿಡ್ ಡ್ಯೂಟಿ ಬೋರ್ಡ್ ಹಾಕಿಕೊಂಡು ಆರಾಮವಾಗಿ ತಿರುಗಾಡುತ್ತಿದ್ದರು.
ಕೊವಿಡ್ ಡ್ಯೂಟಿ ಎಂದು ಬೋರ್ಡ್ ಹಾಕಲಾಗಿದ್ದ ಕಾರ್ ನ ಮುಂಭಾಗ ಹಾಗೂ ಹಿಂಭಾಗದ ಸೀಟ್ ನಲ್ಲಿ ಅಂಗಿಯೂ ಧರಿಸದೇ ಕೇವಲ ಲುಂಗಿಯನ್ನು ಮೈಮೇಲೆ ಸುತ್ತಿಕೊಂಡಿದ್ದ ಇಬ್ಬರು ವ್ಯಕ್ತಿಗಳನ್ನು ಕಂಡು ಅನುಮಾನಗೊಂಡ ಪೊಲೀಸರು ಕಾರನ್ನು ನಿಲ್ಲಿಸಿದ್ದಾರೆ.
ಈ ವೇಳೆ ಕೊವಿಡ್ ಡ್ಯೂಟಿ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಇನ್ನೂ ಇವರಿಗೆ ಕೊವಿಡ್ ಡ್ಯೂಟಿ ಹೆಸರಿನ ಬೋರ್ಡ್ ಗೆ ಅನುಮತಿ ನೀಡಿದವರು ಯಾರು ಎನ್ನುವುದು ತಿಳಿದು ಬಂದಿಲ್ಲ. ರಾಜ್ಯಾದ್ಯಂತ ಇಂತಹದ್ದೊಂದು ಕೃತ್ಯ ನಡೆತ್ತಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.