15-18ವರ್ಷದವರಿಗೆ ಕೊರೊನಾ ಲಸಿಕೆ : ಇಂದಿನಿಂದಲೇ ನೋಂದಣಿ ಪ್ರಕ್ರಿಯೆ ಆರಂಭ
ನವದೆಹಲಿ: ದೇಶದಲ್ಲಿ ಜನವರಿ 3ರಿಂದ 15-18ವರ್ಷದವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಕೊವಿನ್ ಆ್ಯಪ್/ವೆಬ್ಸೈಟ್ನಲ್ಲಿ ನೋಂದಣಿ ಪ್ರಕ್ರಿಯೆ ಶುರುವಾಗಲಿದೆ.
ಆನ್ ಲೈನ್ ಮೂಲಕ ಹಾಗೂ ಕೇಂದ್ರಗಳಿಗೆ ಭೇಟಿ ನೀಡಿಯೂ ರಿಜಿಸ್ಟರ್ ಮಾಡಿಸಿಕೊಳ್ಳಬಹುದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸ್ಥಳದಲ್ಲೇ ನೋಂದಣಿ ಮಾಡಿಸಿಕೊಂಡು ಲಸಿಕೆ ಹಾಕಲು ಕೂಡ ಕ್ರಮಕೈಗೊಳ್ಳಲಾಗಿದೆ.
ಕೊವಿನ್ ಮುಖ್ಯಸ್ಥ ಡಾ. ಆರ್.ಎಸ್. ಶರ್ಮಾ ಈ ಸಂಬಂಧ ಮಾಹಿತಿ ನೀಡಿ, 15-18ನೇ ವರ್ಷದವರು ವ್ಯಾಕ್ಸಿನ್ ಪಡೆದುಕೊಳ್ಳಲು ಆಧಾರ್ ಕಾರ್ಡ್ ಹೊರತು ಪಡಿಸಿ ಶಾಲಾ ಕಾಲೇಜುಗಳ ತರಗತಿಗಳ ಐಡಿ ಕಾರ್ಡ್ನೊಂದಿಗೆ ಕೂಡ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮತಾಂತರದ ಆರೋಪ: ಸೆಂಟ್ ಪೌಲ್ ಶಾಲೆ ಮುಚ್ಚಲು ನೀಡಿದ್ದ ಆದೇಶಕ್ಕೆ ತಡೆ
ಹಿಜಾಬ್ ಧರಿಸಿದ್ದಕ್ಕಾಗಿ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರ ಹಾಕಿದ ಪ್ರಿನ್ಸಿಪಾಲ್
ಪುನೀತ್ ರಾಜ್ ಕುಮಾರ್ ಗೆ ವಿಶಿಷ್ಟ ರೀತಿಯಲ್ಲಿ ನಮನ ಸಲ್ಲಿಸಿದ ಕೆಎಂಎಫ್
ಕ್ರಿಸ್ಮಸ್ ಆಚರಣೆಗೆ ಅಡ್ಡಿ: ಬಜರಂಗದಳ ಕಾರ್ಯಕರ್ತರನ್ನು ತರಾಟೆಗೆತ್ತಿಕೊಂಡ ಮಹಿಳೆಯರು | ವಿಡಿಯೋ ವೈರಲ್