ಕೊರೊನಾ ಲಸಿಕೆ ಪಡೆದ ಬಳಿಕ ಇವರಲ್ಲಿ ಆದ ಬದಲಾವಣೆ ಏನು ಗೊತ್ತಾ?
ಬಳ್ಳಾರಿ: ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳಲು ಹಳ್ಳಿಗಳಲ್ಲಿ ಬಹಳಷ್ಟು ಜನರು ಭಯಪಡುತ್ತಿದ್ದಾರೆ. ಇನ್ನೊಂದೆಡೆ ಕೊವಿಡ್ ವ್ಯಾಕ್ಸಿನ್ ಪಡೆದುಕೊಂಡ್ರೆ, ಮೈ ಎಲ್ಲ ಅಯಸ್ಕಾಂತವಾಗುತ್ತದೆ ಎಂದು ಜನರು ಭೀತರಾಗಿದ್ದಾರೆ. ಇದರ ನಡುವೆಯೇ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೊಡೆ ಗ್ರಾಮದಲ್ಲಿ ನಡೆದ ಘಟನೆಯೊಂದು ಕೊವಿಡ್ ಲಸಿಕೆಯ ಕುರಿತು ಜನರಲ್ಲಿ ವಿಶ್ವಾಸ ಮೂಡಿಸಿದೆ.
ಈ ಗ್ರಾಮದಲ್ಲಿ ಪಾಲಾಕ್ಷ, ಬಸವೇಶ ಎಂಬ ಇಬ್ಬರು ವ್ಯಕ್ತಿಗಳಿಗೆ ಸುಮಾರು 10 ವರ್ಷಗಳಿಂದ ತೀವ್ರವಾದ ಕೀಲುನೋವು ನರಕಯಾತನೆ ನೀಡುತ್ತಿತ್ತು. ಆದರೆ, ಇವರಿಬ್ಬರೂ ಕೊವಿಡ್ ವ್ಯಾಕ್ಸಿನ್ ಪಡೆದ ಬಳಿಕ ಇಬ್ಬರ ಕೀಲು ನೋವು ಕೂಡ ಮಾಯವಾಗಿದೆ ಎಂದು ಇವರು ಹೇಳುತ್ತಿದ್ದಾರೆ.
ಪಾಲಾಕ್ಷ ಅವರಿಗೆ ಮೈ-ಕೈ ನೋವು, ಶುಗರ್ ಕೂಡ ಇತ್ತು. ಬಸವೇಶ ಅವರಿಗೆ 6 ವರ್ಷಗಳಿಂದಲೂ ಕೀಲು ನೋವು, ಅಸ್ತಮಾ, ಮೈಕೈ ನೋವು ಇತ್ತು. ಇವರು ವೀಮ್ಸ್ ಆಸ್ಪತ್ರೆಯಲ್ಲಿ ಈ ಹಿಂದೆ ದಾಖಲಾಗಿ ಚಿಕಿತ್ಸೆ ಕೂಡ ಪಡೆದಿದ್ದರೂ, ಇದು ಗುಣವಾಗಿರಲಿಲ್ವಂತೆ. ಈ ನಡುವೆ ಸ್ಟಿಕ್ ಹಿಡಿದು ನಡೆಯುವ ಸ್ಥಿತಿಗೆ ಅವರು ತಲುಪಿದ್ದರು.
ಕೊವಿಡ್ ವ್ಯಾಕ್ಸಿನ್ ತೆಗೆದುಕೊಂಡ ಬಳಿಕ ಈ ಇಬ್ಬರು ಕೂಡ ಯಾರ ಸಹಾಯವೂ ಇಲ್ಲದೇ, ಯಾವ ಸ್ಟಿಕ್ ಗಳನ್ನೂ ಬಳಸದೇ ನಡೆದಾಡುತ್ತಿದ್ದಾರೆ. ಎಲ್ಲರಂತೆಯೇ ಅವರು ಕೂಡ ಯಾವುದೇ ನೋವುಗಳಿಲ್ಲದೇ ಆರೋಗ್ಯವಂತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.