ಶಾಕಿಂಗ್ ನ್ಯೂಸ್: 2 ಡೋಸ್ ಕೊವಿಡ್ ಲಸಿಕೆ ಪಡೆದಿದ್ದರೂ ವ್ಯಕ್ತಿ ಕೊರೊನಾಕ್ಕೆ  ಬಲಿ - Mahanayaka
10:24 PM Tuesday 4 - February 2025

ಶಾಕಿಂಗ್ ನ್ಯೂಸ್: 2 ಡೋಸ್ ಕೊವಿಡ್ ಲಸಿಕೆ ಪಡೆದಿದ್ದರೂ ವ್ಯಕ್ತಿ ಕೊರೊನಾಕ್ಕೆ  ಬಲಿ

covid death
17/11/2021

ಇಂದೋರ್: ಕೊವಿಡ್ ಲಸಿಕೆ ಎರಡು ಲಸಿಕೆ ಡೋಸ್ ಪಡೆದ ಮಧ್ಯಪ್ರದೇಶದ ಇಂದೋರ್ ನ 69 ವರ್ಷದ ವ್ಯಕ್ತಿಯೊಬ್ಬರು ಕೊವಿಡ್ ಗೆ ಬಲಿಯಾದ ಘಟನೆ  ನಡೆದಿದ್ದು, ಕೊವಿಡ್  ಎರಡು ಡೋಸ್ ಪಡೆದುಕೊಂಡಿದ್ದರೂ ಅವರು ಕೊವಿಡ್ ಗೆ ಬಲಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವೆಂಬರ್ 9ರಂದು ವ್ಯಕ್ತಿಯೊಬ್ಬರು ಕೊವಿಡ್ ಸೋಂಕಿನಿಂದ ಮನೋರಮಾ ರಾಜೇ ಟಿ ಬಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಪರಿಸ್ಥಿತಿ ಗಂಭೀರವಾಗಿತ್ತು. ಮತ್ತು ಅವರು ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಸಾವಿಗೀಡಾಗಿದ್ದಾರೆ ಎಂದು ಇಂದೋರ್ ಕೊವಿಡ್ 19 ನೋಡೆಲ್ ಅಧಿಕಾರಿ ಡಾ.ಅಮಿತ್ ತಿಳಿಸಿದ್ದಾರೆ.

ಇಂದೋರ್ ನಲ್ಲಿ ಕಳೆದ ನಾಲ್ಕೂವರೆ ತಿಂಗಳಿನ ಬಳಿಕ ಇದು ಮೊದಲನೆಯ ಕೊವಿಡ್ ಸಂಬಂಧಿತ ಸಾವಾಗಿದೆ ಎಂದು ಅಮಿತ್ ತಿಳಿಸಿದ್ದು, ಮೃತರು ದೀರ್ಘ ಕಾಲದಿಂದಲೂ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು. ಎರಡು ಡೋಸ್ ಲಸಿಕೆ ಪಡೆದರೂ ಅವರು ಕೊವಿಡ್ ನಿಂದ ಮೃತಪಟ್ಟಿದ್ದಾರೆ ಎಂದು ಡಾ. ಅಮಿತ್  ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ವಿಶಾಲ್ ರನ್ನು ನೋಡಿದಾಗ ನನ್ನ ತಮ್ಮನನ್ನು ನೋಡಿದ ಹಾಗೆಯೇ ಆಗುತ್ತದೆ, ಅಪ್ಪು ಬಳಿಯೂ ಇದನ್ನು ಹೇಳಿದ್ದೆ | ಶಿವರಾಜ್ ಕುಮಾರ್

ವಾಯು ಮಾಲಿನ್ಯದಿಂದ ಕಂಗೆಟ್ಟ ದೆಹಲಿ: ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಪುನೀತ್ ಅವರಿಗೆ ‘ಕರ್ನಾಟಕ ರತ್ನ’ದ ಜೊತೆಗೆ ರಾಷ್ಟ್ರಮಟ್ಟದ ಉನ್ನತ ಗೌರವಕ್ಕೂ ಶಿಫಾರಸು | ಸಿಎಂ ಬಸವರಾಜ್ ಬೊಮ್ಮಾಯಿ

ಅಪಘಾತದಲ್ಲಿ ಮೃತಪಟ್ಟ ಪುನೀತ್ ಅಭಿಮಾನಿ ಕೊನೆಯ ಕ್ಷಣದಲ್ಲಿ ಪತ್ನಿಗೆ ಹೇಳಿದ ಮಾತು ಕಣ್ಣೀರು ತರಿಸುತ್ತದೆ!

ಅವನಿಗೆ ನನ್ನ ದೃಷ್ಟಿಯೇ ತಾಗಿತೇನೋ… | ಕಣ್ಣೀರು ಹಾಕುತ್ತಲೇ ಮಾತನಾಡಿದ ನಟ ಶಿವರಾಜ್ ಕುಮಾರ್

ಬಿಟ್ ಕಾಯಿನ್  ಪ್ರಮುಖ ಆರೋಪಿ  ಶ್ರೀಕಿಯ ಎನ್ ಕೌಂಟರ್ ಸಾಧ್ಯತೆ?

ಇತ್ತೀಚಿನ ಸುದ್ದಿ