ಕೊವಿಡ್ ಲಸಿಕೆ ಪಡೆದು 20 ದಿನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸದಿರಿ!
ನವದೆಹಲಿ: ಕೊವಿಡ್ 19 ಲಸಿಕೆ ಅಭಿಯಾನ ಆರಂಭಗೊಂಡು 8 ತಿಂಗಳು ಕಳೆದಿದೆ. ಈವರೆಗೆ ದೇಶದಲ್ಲಿ 50 ಕೋಟಿಗೂ ಹೆಚ್ಚು ಜನರು ಕೊವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಕೊವಿಡ್ ಲಸಿಕೆ ಪಡೆದ ಬಳಿಕ ಉಂಟಾಗುತ್ತಿರುವ ಅಡ್ಡ ಪರಿಣಾಮಗಳ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟತೆಗಳು ಸಿಕ್ಕಿಲ್ಲ.
ಕೊವಿಡ್ ಲಸಿಕೆ ಪಡೆದವರಲ್ಲಿ ಹೆಚ್ಚಿನ ಜನರು ಜ್ವರ, ತಲೆನೋವು ಸೇರಿದಂತೆ ಹಲವು ಗಂಭೀರ ಲಕ್ಷಣಗಳನ್ನು ಎದುರಿಸಿದ್ದಾರೆ. ಆದರೆ ಇನ್ನು ಕೆಲವರಿಗೆ ಕೊವಿಡ್ ಲಸಿಕೆಯಿಂದ ಯಾವುದೇ ಪರಿಣಾಮ ಉಂಟಾಗಿಲ್ಲ. ಸದ್ಯ ದೇಶದಲ್ಲಿ ಕೊವಿಡ್ ಲಸಿಕೆ ಅಭಿಯಾನ ವೇಗವನ್ನು ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, @COVIDNewsByMIB ಟ್ವಿಟರ್ ಹ್ಯಾಂಡಲ್ ಸಲಹೆ ನೀಡಿದೆ.
ಕೊವಿಡ್ 19 ಪಡೆದ ಬಳಿಕ 20 ದಿನಗಳೊಳಗೆ ಕಂಡು ಬರುವ ಕೆಲವು ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂದು ಹೇಳಿದ್ದು, ಉಸಿರಾಟದ ತೊಂದರೆ, ಎದೆ ನೋವು, ತೋಳು, ಕಾಲಿನ ನೋವು, ಕಾಲು-ತೋಳಿನ ಊತ, ವಾಂತಿ ಅಥವಾ ನಿರಂತರ ಹೊಟ್ಟೆ ನೋವು, ಇಂಜೆಕ್ಷನ್ ಸ್ಥಳದಿಂದ ಚರ್ಮದ ಮೇಲೆ ರಕ್ತದ ಸಣ್ಣ ಅಥವಾ ದೊಡ್ಡ ಕುರುಹುಗಳು, ಮಸುಕಾದ ದೃಷ್ಟಿ ಅಥವಾ ಕಣ್ಣುಗಳಲ್ಲಿ ನೋವು. ಯಾವುದೇ ಸ್ಪಷ್ಟ ಕಾರಣವಿಲ್ಲದೆ ನಿರಂತರವಾಗಿ ವಾಂತಿ, ದೇಹದ ಯಾವುದೇ ಭಾಗದಲ್ಲಿ ದುರ್ಬಲತೆ, ತೀವ್ರ ಅಥವಾ ನಿರಂತರ ತಲೆನೋವು ಸೇರಿದಂತೆ ಬೇರೆ ಯಾವುದೇ ಸಮಸ್ಯೆ ನಿರಂತರವಾಗಿ ಕಾಡಿದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಬೇಕು ಎಂದು ತಿಳಿಸಿದೆ.
ಕೊರೊನಾ ವಿರುದ್ಧದ ಹೋರಾಟಕ್ಕೆ ಲಸಿಕೆ ಅತ್ಯಗತ್ಯವಾಗಿದೆ. ಆದರೂ ಲಸಿಕೆ ಪಡೆದ ಬಳಿಕವೂ ನಮ್ಮ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸಬೇಕಿದೆ. ಹಾಗಾಗಿ ಲಸಿಕೆ ಪಡೆದ ಬಳಿಕ ಮೇಲೆ ಕಂಡು ಬಂದ ಸಮಸ್ಯೆಗಳು ನಿಮ್ಮಲ್ಲಿ ಕಂಡು ಬಂದರೆ, ತಡ ಮಾಡದೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.
ಇನ್ನಷ್ಟು ಸುದ್ದಿಗಳು…
ನರ್ಸ್ ನ ನಗ್ನ ಚಿತ್ರ ತೆಗೆದು ಲೈಂಗಿಕ ಕ್ರಿಯೆ ನಡೆಸಲು ಬ್ಲ್ಯಾಕ್ ಮೇಲ್ | ವೈದ್ಯನ ವಿರುದ್ಧ ದೂರು
ರಾಜೀವ್ ಗಾಂಧಿ 77ನೇ ಜನ್ಮ ದಿನಾಚರಣೆ: ವೀರಭೂಮಿಯಲ್ಲಿ ನಮನ ಸಲ್ಲಿಸಿ, ಕಾಲ ಕಳೆದ ರಾಹುಲ್ ಗಾಂಧಿ
ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಫ್ಘಾನಿಸ್ತಾನಕ್ಕೆ ಹೋಗಿ ಎಂದ ಬಿಜೆಪಿ ನಾಯಕ!
ಅಫ್ಘಾನ್ ನಲ್ಲಿ ತಾಲಿಬಾನಿಗಳ ವಿಜಯ: ಭಾರತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು | ತಜ್ಞರ ಎಚ್ಚರಿಕೆ
ಟ್ವಿಟರ್ ಬರ್ಡ್ ಫ್ರೈ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು | ರಾಹುಲ್ ಖಾತೆ ಲಾಕ್ ಗೆ ಆಕ್ರೋಶ
ಡೆತ್ ನೋಟ್ ಬರೆದಿಟ್ಟು ಇಡೀ ಕುಟುಂಬವೇ ನಾಪತ್ತೆ! | ಆತಂಕದಲ್ಲಿ ಸಂಬಂಧಿಕರು




























