“ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಕೊವಿಡ್ ಲಸಿಕೆ ಸಾಗಾಟದ ಹಿಂದೆ ತೇಜಸ್ವಿ ಸೂರ್ಯ” - Mahanayaka

“ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಕೊವಿಡ್ ಲಸಿಕೆ ಸಾಗಾಟದ ಹಿಂದೆ ತೇಜಸ್ವಿ ಸೂರ್ಯ”

tejaswi surya
30/05/2021

ಬೆಂಗಳೂರು: ಕೋವಿಡ್‌-19 ಲಸಿಕೆಗಳನ್ನು ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗಳತ್ತ ಸಾಗಿಸುತ್ತಿರುವುದರ ಹಿಂದೆ ಸಂಸದ ತೇಜಸ್ವಿ ಸೂರ್ಯ ಹಾಗೂ ರವಿ ಸುಬ್ರಹ್ಮಣ್ಯ ಅವರ ಪಾತ್ರವಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇವರನ್ನು ಬಂಧಿಸುವಂತೆ ಒತ್ತಾಯಿಸಿದೆ.

ಖಾಸಗಿ ಆಸ್ಪತ್ರೆಯೊಂದರ ಉಸ್ತುವಾರಿದಾರರದ್ದು ಎನ್ನಲಾದ ದನಿಯ ಆಡಿಯೋ ರೆಕಾರ್ಡಿಂಗ್ ಒಂದನ್ನು ಬಹಿರಂಗಪಡಿಸಿದ ಕಾಂಗ್ರೆಸ್ ನಾಯಕರು, ಕೋವಿಡ್ ಲಸಿಕೆಯ ಪ್ರತಿಯೊಂದು ಡೋಸ್‌ಗೂ 700 ರೂಪಾಯಿಗಳನ್ನು ತೇಜಸ್ವಿ ಸೂರ್ಯರ ಚಿಕ್ಕಪ್ಪ, ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯಗೆ ಪಾವತಿ ಮಾಡಬೇಕೆಂದು ಆಡಿಯೋದಲ್ಲಿ ಹೇಳಿರುವುದಾಗಿ ಆರೋಪಿಸಿದೆ.

ಲಸಿಕೆಗೆ 900 ರೂ ಖರ್ಚಾಗಲಿದ್ದು, ಇದಲ್ಲಿ 700 ರೂಗಳನ್ನು ತೇಜಸ್ವಿ ಸೂರ್ಯನ ಚಿಕ್ಕಪ್ಪ, ಬಸನವಗುಡಿಯ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯಗೆ ನೀಡಬೇಕೆಂದು ಆಸ್ಪತ್ರೆಯೊಂದರ ಮೇಲುಸ್ತುವಾರಿಯೊಬ್ಬರು ಹೇಳುತ್ತಿರುವುದು ಆಡಿಯೋ ರೆಕಾರ್ಡಿಂಗ್‌ನಲ್ಲಿ ದಾಖಲಾಗಿದೆ,” ಎಂದು ಕಾಂಗ್ರೆಸ್ ವಕ್ತಾರ ಪವನ್ನ ಖೇರಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇದೇ ಕಾರಣಕ್ಕೆ ತೇಜಸ್ವಿ ಸೂರ್ಯ ನಿರ್ದಿಷ್ಟ ಆಸ್ಪತ್ರೆಯೊಂದರಲ್ಲಿ  ಹಣ ಕೊಟ್ಟು ಲಸಿಕೆ ಹಾಕಿಸಿಕೊಳ್ಳಿ ಎಂದು ಜಾಹೀರಾತು ಹಾಕಿದ್ದಾರೆ. ಹೀಗಾಗಿ ಇವರಿಬ್ಬರ ವಿರುದ್ಧವೂ ಎಫ್ ಐ ಆರ್ ದಾಖಲಿಸಿ ಬಂಧಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಇತ್ತೀಚಿನ ಸುದ್ದಿ