ಕೋವಿಶೀಲ್ಡ್ ಲಸಿಕೆ ವಿತರಣೆಗೆ ಚಾಲನೆ | ಲಸಿಕೆ ಹಾಕಿದ ತಕ್ಷಣ ಕೇಂದ್ರದಿಂದ ಹೊರ ಹೋಗುವಂತಿಲ್ಲ ಯಾಕೆ ಗೊತ್ತಾ? - Mahanayaka

ಕೋವಿಶೀಲ್ಡ್ ಲಸಿಕೆ ವಿತರಣೆಗೆ ಚಾಲನೆ | ಲಸಿಕೆ ಹಾಕಿದ ತಕ್ಷಣ ಕೇಂದ್ರದಿಂದ ಹೊರ ಹೋಗುವಂತಿಲ್ಲ ಯಾಕೆ ಗೊತ್ತಾ?

16/01/2021

ಬೆಂಗಳೂರು: ಕೋವಿಶೀಲ್ಡ್ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಇಂದು ದೇಶಾದ್ಯಂತ ವಿದ್ಯುಕ್ತವಾಗಿ ಚಾಲನೆ ದೊರೆತಿದ್ದು,  ದೇಶದ 3600 ಸ್ಥಳಗಳಲ್ಲಿ 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. ಕರ್ನಾಟಕದಲ್ಲಿ ಬೆಂಗಳೂರಿನ ವಿಕ್ಟೋರಿಯಾ ಮತ್ತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಲಸಿಕೆ ವಿತರಣೆ  ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.

ಮೊದಲ ದಿನವಾದ ಇಂದು ಆಯ್ದ ಸ್ಥಳಗಳಲ್ಲಿ ನೂರು ಮಂದಿಗೆ ಲಸಿಕೆ ನೀಡಲಾಯಿತು. ಪ್ರತಿಯೊಂದು ಲಸಿಕಾ ಕೇಂದ್ರದಲ್ಲಿ ಐದು ಮಂದಿ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.ಸೋಮವಾರ, ಬುಧವಾರ, ಗುರುವಾರ, ಶನಿವಾರ ಕೊರೊನಾ ಲಸಿಕೆ ನೀಡಿಕೆಗೆ ಮೀಸಲಿಡಲಾಗಿದೆ. ಮಂಗಳವಾರ, ಶುಕ್ರವಾರ ಇತರೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು.

ಈ ತಿಂಗಳ ಅಂತ್ಯದ ವೇಳೆಗೆ 5 ಸಾವಿರ ಸ್ಥಳಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ಮಾರ್ಚ್ ಅಂತ್ಯಕ್ಕೆ ದೇಶದ 12 ಸಾವಿರ ಸ್ಥಳದಲ್ಲಿ ಲಸಿಕೆ ನೀಡಲಾಗುತ್ತದೆ. ಇಂದು ಲಸಿಕೆ ಹಾಕಿಸಿಕೊಂಡವರು ಅರ್ಧ ಗಂಟೆಯವರೆಗೆ ವಿಶ್ರಾಂತಿ ಪಡೆಯುವಂತೆ ಆರೋಗ್ಯ ಸಚಿವಾಲಯ ಸೂಚಿಸಿದೆ. ಒಬ್ಬರು ಲಸಿಕೆ ಹಾಕಿಸಿಕೊಂಡ ಮೇಲೆ ಕೇಂದ್ರದಿಂದ ತಕ್ಷಣವೇ ಹೊರಹೋಗಬಾರದೆಂದು ಸೂಚಿಸಲಾಗಿದೆ. ಲಸಿಕೆಯ ಪರಿಣಾಮ ಯಾವ ರೀತಿ ದೇಹದಲ್ಲಿ ಮೇಲಾಗುತ್ತದೆ ಎಂಬುದನ್ನು ಗಮನಿಸುತ್ತಿರುವಂತೆ ಸೂಚಿಸಲಾಗಿದೆ.

ಇತ್ತೀಚಿನ ಸುದ್ದಿ