ವ್ಯಾಕ್ಸಿನ್ ತಗೋಬೇಡಿ ಎಂದು ಚರ್ಚ್ ನಲ್ಲಿ ಅಪಪ್ರಚಾರ ಮಾಡ್ತಿದ್ದಾರೆ | ಶೋಭಾ ಕರಂದ್ಲಾಜೆ

shobha karandlaje
19/05/2021

ಚಿಕ್ಕಮಗಳೂರು: ವ್ಯಾಕ್ಸಿನ್ ತಗೋಬೇಡಿ ಎಂದು ಚರ್ಚ್ ಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಚಿಕ್ಕಮಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

ಮೂಡಿಗೆರೆ ಆಲ್ದೂರಿನ ಕೆಲವು ಚರ್ಚ್ ಗಳಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಮತಾಂತರಗೊಂಡವರು ಚರ್ಚ್ ಗೆ ಹೋದಾಗ ಈ ರೀತಿಯ ಪ್ರಚಾರ ಮಾಡುತ್ತಾರೆ. ಆದರೆ ಅವರು(ಚರ್ಚ್ ನವರು) ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಶೋಭಾ ಆರೋಪಿಸಿದ್ದಾರೆ.

ಇದು ಕ್ಯಾಥೋಲಿಕ್ ಚರ್ಚ್ ನವರು ಹೇಳಿದ್ದು  ಅಂತ ಅಲ್ಲ,  ಬೇರೆ ಚರ್ಚ್ ಇರಬಹುದು ಇತ್ತೀಚೆಗೆ ಬಂದ ಚರ್ಚ್ ಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ. ಪ್ರಾಟೆಸ್ಟೆಂಟ್, ಸಂಥಕೋಸ್ಟ್ ಚರ್ಚ್ ಗಳಲ್ಲಿ ಅಪಪ್ರಚಾರ ನಡೆಯುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಶೋಭಾ ಒತ್ತಾಯಿಸಿದ್ದಾರೆ.

ಶೋಭಾ ಕರಂದ್ಲಾಜೆ ಅವರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿಗಳಿರುತ್ತಿದ್ದರೆ. ಸಾಕ್ಷಿ ಸಹಿತವಾಗಿ ದೂರು ನೀಡುವುದು ಬಿಟ್ಟು, ಚರ್ಚ್ ನಲ್ಲಿ ಈ ವ್ಯಾಕ್ಸಿನ್ ತಗೋಬೇಡಿ ಎಂದು ಹೇಳುತ್ತಿದ್ದಾರೆ ಎಂದು ಅಪಪ್ರಚಾರ ನಡೆಸುತ್ತಿರುವುದು ಏಕೆ? ಎನ್ನುವ ಪ್ರಶ್ನೆಗಳು ಕೇಳಿ ಬಂದಿದ್ದು, ಚರ್ಚ್ ನವರು ಅಪಪ್ರಚಾರ ನಡೆಸುತ್ತಿದ್ದಾರೋ ಅಥವಾ ರಾಜ್ಯ ಸರ್ಕಾರದ ಮಾನ ಮರ್ಯದೆ ಉಳಿಸಿಕೊಳ್ಳಲು ಶೋಭಾ ಕರಂದ್ಲಾಜೆ ಅಪಪ್ರಚಾರ ಮಾಡುತ್ತಿದ್ದಾರೋ ಎನ್ನುವ ಅನುಮಾನಗಳು ಇದೀಗ  ವ್ಯಕ್ತವಾಗಿವೆ.

ಇತ್ತೀಚಿನ ಸುದ್ದಿ

Exit mobile version