ವಿದ್ಯಾರ್ಥಿನಿಯರನ್ನು ನಡು ರಸ್ತೆಯಲ್ಲಿ ಇಳಿಸಿದ್ದ ಜಿಲ್ಲಾಧಿಕಾರಿಗಳು,  ಏನು ಕೆಲಸ ಮಾಡಿದ್ದಾರೆ ನೋಡಿ! - Mahanayaka
12:17 AM Sunday 15 - December 2024

ವಿದ್ಯಾರ್ಥಿನಿಯರನ್ನು ನಡು ರಸ್ತೆಯಲ್ಲಿ ಇಳಿಸಿದ್ದ ಜಿಲ್ಲಾಧಿಕಾರಿಗಳು,  ಏನು ಕೆಲಸ ಮಾಡಿದ್ದಾರೆ ನೋಡಿ!

udupi dc
24/04/2021

ಉಡುಪಿ: ಬಸ್ ನಲ್ಲಿ ಕೊವಿಡ್ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ವಿದ್ಯಾರ್ಥಿನಿಯರನ್ನು ಬಸ್ ನಿಂದ ಇಳಿಸಿದ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು  ಕಾರ್ಯಕ್ರಮವೊಂದರಲ್ಲಿ ಮಾಸ್ಕ್ ಧರಿಸದೇ ಫೋಟೋಗೆ ಪೋಸ್ ನೀಡಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸ್ ಅಧಿಕಾರಿಯೊಬ್ಬರ ಮಗಳ ಮೆಹೆಂದಿ ಕಾರ್ಯಕ್ರಮ ಎನ್ನಲಾಗಿರುವ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲಿಸದೇ ನಿಂತಿರುವುದು ಕಂಡು ಬಂದಿದೆ.

ವಿದ್ಯಾರ್ಥಿನಿಯರನ್ನು ನಡು ರಸ್ತೆಯಲ್ಲಿ ಬಸ್ಸಿನಿಂದ ಇಳಿಸಿ, ರಾತ್ರಿಯವರೆಗೆ ರಸ್ತೆ ಬದಿಯಲ್ಲಿ ಬಸ್ಸಿಲ್ಲದೇ ಕಾಯುವಂತೆ ಮಾಡಿದ್ದ ಜಿಲ್ಲಾಧಿಕಾರಿಗಳು ಕೊವಿಡ್ ನಿಯಮಗಳ ಉಲ್ಲಂಘನೆಯ ನೆಪ ಹೇಳಿದ್ದರು. ಆದರೆ ಇದೀಗ ಜಿಲ್ಲಾಧಿಕಾರಿಯವರೇ ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸದೇ ಫೋಟೋಗೆ ಪೋಸು ನೀಡಿದ್ದಾರೆ ಎಂದು ಸಾರ್ವಜನಿಕರು ಚರ್ಚಿಸುತ್ತಿದ್ದಾರೆ.

ಕೊವಿಡ್ ಮಾರ್ಗಸೂಚಿಗಳನ್ನು ಜನರು ಮಾತ್ರವೇ ಪಾಲಿಸಬೇಕೇ? ಜಿಲ್ಲಾಧಿಕಾರಿಗಳಿಗೆ ಕೊವಿಡ್ ಮಾರ್ಗಸೂಚಿಗಳು ಅನ್ವಯವಾಗುವುದಿಲ್ಲವೇ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ

ಜಿಲ್ಲಾಧಿಕಾರಿಗಳ ಸಾಹಸ ಕಾರ್ಯದಿಂದ ಬಸ್ ಸಿಗದೇ ಪರದಾಡಿದ ವಿದ್ಯಾರ್ಥಿನಿಯರು

ಇತ್ತೀಚಿನ ಸುದ್ದಿ