40 ಅಡಿ ಆಳದ ಬಾವಿಗೆ ಬಿದ್ದ ಕರು: ಸಾಮಾಜಿಕ ಕಾರ್ಯಕರ್ತ ಅಶೋಕ್ ಶೆಟ್ಟಿ, ಅಗ್ನಿಶಾಮಕ ದಳದಿಂದ ರಕ್ಷಣೆ
ಉಡುಪಿ: ಸುಮಾರು 40 ಅಡಿ ಆಳದ ಬಾವಿಗೆ ಬಿದ್ದ ಗಂಡು ಕರುವನ್ನು ರಕ್ಷಣೆ ಮಾಡಿದ ಘಟನೆ ಇಂದು ಅಲೆವೂರಿನ ರಾಂಪುರದಲ್ಲಿ ಇಂದು ನಡೆದಿದೆ.
ಮೇಯಲು ಬಿಟ್ಟಿದ್ದ ಗಂಡು ಕರು, ಬಾವಿಯ ಬಳಿ ಸೊಪ್ಪು ತಿನ್ನಲು ಹೋಗಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯೊಳಗೆ ಬಿದ್ದಿದೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಸಾಮಾಜಿಕ ಕಾರ್ಯಕರ್ತ ಅಶೋಕ್ ಶೆಟ್ಟಿ ದಂದೂರುಕಟ್ಟೆ ಅವರಿಗೆ ಮಾಹಿತಿ ನೀಡಿದರು.
ಅದರಂತೆ ತಕ್ಷಣ ಸ್ಥಳಕ್ಕೆ ಬಂದ ಅಶೋಕ್ ಶೆಟ್ಟಿ ಅವರು ಬಾವಿಗಿಳಿದು ಕರು ಮುಳುಗದಂತೆ ಎತ್ತಿ ಹಿಡಿದರು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಅಶೋಕ್ ಶೆಟ್ಟಿ ಅವರು ಸೇರಿಕೊಂಡು ಕರುವಿನ ನಾಲ್ಕು ಕಾಲುಗಳ ಮಧ್ಯೆ ಹಗ್ಗಕಟ್ಟಿ ಕರುವನ್ನು ಮೇಲಕ್ಕೆತ್ತಿದರು. ಸ್ಥಳೀಯರು ಸಹಕಾರ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw