ಗೋವಾದಲ್ಲಿ ಅತೀ ದೊಡ್ಡ ಗೋಮಾಂಸ ಮಾರುಕಟ್ಟೆ ಪುನರಾರಂಭ - Mahanayaka
7:19 AM Thursday 12 - December 2024

ಗೋವಾದಲ್ಲಿ ಅತೀ ದೊಡ್ಡ ಗೋಮಾಂಸ ಮಾರುಕಟ್ಟೆ ಪುನರಾರಂಭ

24/12/2020

ಪಣಜಿ:  ಗೋವಾದಲ್ಲಿ ಅತಿದೊಡ್ಡ ಗೋಮಾಂಸ ಮಾರುಕಟ್ಟೆಯಾದ ಮರ್ಗೋವಾ ಮಂಗಳವಾರ ತೆರೆದಿದ್ದು, ಗೋಮಾಂಸ ಪೂರೈಕೆಯಾದ ಹಿನ್ನೆಲೆಯಲ್ಲಿ ಮತ್ತೆ ಈ ಮಾರುಕಟ್ಟೆ ತೆರೆದಿದೆ.

ಕರ್ನಾಟಕದಿಂದ ಗೋಮಾಂಸ ಅತೀ ಹೆಚ್ಚು ಸರಬರಾಜಾಗುತ್ತಿದ್ದು,  ಕರ್ನಾಟಕದ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆಯಾದ ಬಳಿಕ ಗೋವಾ ಗೋಮಾಂಸ ವ್ಯಾಪಾರದಲ್ಲಿ ವ್ಯತ್ಯಾಸ ಕಂಡುಬಂದಿತ್ತು.

ಮಂಗಳವಾರದಿಂದ ಮಾರುಕಟ್ಟೆ ಪುನರಾರಂಭವಾಗಿದೆ. ಸದ್ಯ ಲಭ್ಯವಿರುವ ಮಾಂಸವನ್ನು ಎಷ್ಟು ಸಮಯದವರೆಗೆ ಪೂರೈಸಬಹುದು ಎಂಬ ಬಗ್ಗೆ ವ್ಯಾಪಾರಿಗಳು ಯೋಚಿಸುತ್ತಿದ್ದಾರೆ.  ಇನ್ನೂ ದೇಶಾದ್ಯಂತ ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ನಾಯಕರು ಗೋವಾದ ವಿಚಾರದಲ್ಲಿ ಮೌನವಹಿಸಿದ್ದಾರೆ.

ಗೋವಾದ ಜನತೆಗೆ ಗೋಮಾಂಸ ಪ್ರಿಯವಾದ ಭಕ್ಷ್ಯವಾಗಿದೆ. ಇಲ್ಲಿ ಗೋಮಾಂಸ ಇಲ್ಲದೇ ಜನ ದಿನ ದೂಡುವುದೇ ಇಲ್ಲ. ಮುಖ್ಯವಾಗಿ ಪ್ರವಾಸಿ ತಾಣವಾಗಿರುವ ಗೋವಾದಲ್ಲಿ ಗೋಮಾಂಸಕ್ಕೆ ಭಾರೀ ಬೇಡಿಕೆ ಇದೆ. ಸದ್ಯ ಮುಚ್ಚಿದ್ದ ಗೋಮಾಂಸ ಮಾರುಕಟ್ಟೆ ಮತ್ತೆ ತೆರೆದಿದ್ದು, ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಮಾಡದೇ ಹಿಂದಿನ ಬೆಲೆಯಲ್ಲಿಯೇ ಗ್ರಾಹಕರಿಗೆ ಗೋಮಾಂಸ ಮಾರಾಟ ಮಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿ