2.61 ಕೋಟಿ ರೂಪಾಯಿಗೆ ಹರಾಜಾದ ಹಸು | ವಿಶ್ವ ದಾಖಲೆ ಬರೆದ ಹಸು
08/02/2021
ಲಂಡನ್: 2.61 ಕೋಟಿ ರೂಪಾಯಿಗೆ ಹಸುವೊಂದು ಹರಾಜಾಗಿದ್ದು, ಅತೀಹೆಚ್ಚು ಬೆಲೆಗೆ ಮಾರಾಟವಾದ ಹಸು ಎಂದು ದಾಖಲೆ ಬರೆದಿದೆ. 2,62,000 ಪೌಂಡ್ಸ್ ಗೆ ಈ ಹಸು ಹರಾಜಾಗಿದ್ದು, ಇದು ಭಾರತದಲ್ಲಿ ಸುಮಾರು 2.61 ಕೋ.ರೂ. ಆಗುತ್ತದೆ.
ಮಧ್ಯ ಇಂಗ್ಲೆಂಡ್ ನಲ್ಲಿ ಹಸು ಹರಾಜು ಪ್ರಕ್ರಿಯೆ ನಡೆದಿದ್ದು, ನಾಲ್ಕು ತಿಂಗಳ ಫೋಶ್ ಸ್ವೈಸ್ ತಳಿಯ ಈ ಹಸು ಮಾರಾಟ ಬೆಲೆಯಲ್ಲಿ ವಿಶ್ವ ದಾಖಲೆ ಬರೆದಿದೆ. 2014ರಲ್ಲಿ ಇದೇ ತಳಿಯ ಹದು ಮಾರಾಟವಾಗಿದ್ದು, ಈ ಬಾರಿ ಅದಕ್ಕಿಂತಲೂ ಅಧಿಕ ಬೆಲೆಗೆ ಹಸು ಮಾರಾಟವಾಗಿದೆ.
ಹೈನುಗಾರಿಕೆ ಮಾಡುತ್ತಿರುವ ಕ್ರಿಸ್ಟೀನ್ ವಿಲಿಯಮ್ಸ್ ಅವರ ತಂದೆ ಈ ತಳಿಯನ್ನು ಸಾಕಿದ್ದರು. ತಂದೆಯ ನಿಧನದ ಬಳಿಕ ಕ್ರಿಸ್ಟೀನ್ ಈ ಹಸು ಸಾಕಣಿಕೆಯನ್ನು ಮುಂದುವರಿಸಿದ್ದಾರೆ.
ಇನ್ನೂ ಹಸು ದಾಖಲೆಯ ಬೆಲೆಗೆ ಮಾರಾಟವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಕ್ರಿಸ್ಟೀನ್ ಇಷ್ಟೊಂದು ದುಬಾರಿ ಬೆಲೆಗೆ ಹಸು ಮಾರಾಟವಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ನನಗೆ ಇಂದು ಬಹಳ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.