ಸಿಪಿಐನಿಂದ ಕಾಂಗ್ರೆಸ್ ಗೆ ಹೋಗುವಾಗ ಸಿಪಿಐ ಕಚೇರಿಯ ಎಸಿಯನ್ನೂ ಕೊಂಡೊಯ್ದ ಕನ್ಹಯ್ಯಾ!
ನವದೆಹಲಿ: ಜೆಎನ್ ಯು ವಿದ್ಯಾರ್ಥಿ ನಾಯಕನಾಗಿ ಹೊರ ಹೊಮ್ಮಿದ್ದ ಕನ್ಹಯ್ಯಾ ಕುಮಾರ್ ಇದೀಗ ಸಿಪಿಐನಿಂದ ಕಾಂಗ್ರೆಸ್ ಗೆ ಹಾರಿದ್ದಾರೆ. ಇದೇ ಸಂದರ್ಭದಲ್ಲಿ ಪಾಟ್ನಾದ ಸಿಪಿಐ ಕಚೇರಿಗೆ ಅಳವಡಿಸಲಾಗಿದ್ದ ಎಸಿಯನ್ನು ಕೂಡ ಅವರು ತೆಗೆಸಿದ್ದಾರೆ.
ಈ ಎಸಿಯನ್ನು ಕನ್ಹಯ್ಯಾ ಅವರೇ ಸಿಪಿಐ ಕಚೇರಿಗೆ ಹಾಕಿಸಿದ್ದರು ಎನ್ನಲಾಗಿದೆ. ಪಕ್ಷ ಬದಲಾವಣೆಯಾಗುವ ಸಂದರ್ಭದಲ್ಲಿ ಸಿಪಿಐ ಕಚೇರಿಗೆ ಹಾಕಿದ್ದ ಎಸಿಯನ್ನು ತೆಗೆಸಿದ್ದಾರೆ ಎಂದು ಹೇಳಲಾಗಿದೆ. ಈ ವಿಚಾರವನ್ನು ಸ್ಪಷ್ಟಪಡಿಸಿರುವ ಸಿಪಿಐ ಬಿಹಾರ ರಾಜ್ಯ ಕಾರ್ಯದರ್ಶಿ ರಾಮ್ ನರೇಶ್ ಪಾಂಡೆ, ಎಸಿಯನ್ನು ಅವರೇ ಹಾಕಿಸಿದ್ದರಿಂದಾಗಿ ಅದನ್ನು ತೆಗೆಯಲು ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಕಾಂಗ್ರೆಸ್ ಸೇರುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಪಾಂಡೆ, ಕನಯ್ಯಾ ಅವರ ಮನಃಸ್ಥಿತಿ ಕಮ್ಯುನಿಸ್ಟ್ ಆಗಿರುವುದರಿಂದ ಹಾಗೂ ಇಂತಹ ಜನರು ತಮ್ಮ ಸಿದ್ಧಾಂತಕ್ಕೆ ಬಲವಾಗಿ ಅಂಟಿಕೊಳ್ಳುವುದರಿಂದ ಕನ್ಹಯ್ಯಾ ಕಾಂಗ್ರೆಸ್ ಸೇರುವುದಿಲ್ಲ ಎಂದು ನಾನು ಈಗಲೂ ನಂಬಿದ್ದೇನೆ ಎಂದು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಸ್ವಇಚ್ಛೆಯಿಂದ ಮಾತ್ರ ಮತಾಂತರವಾಗಲು ಕಾನೂನಿನಲ್ಲಿ ಅವಕಾಶವಿದೆ | ಸಿಎಂ ಬಸವರಾಜ ಬೊಮ್ಮಾಯಿ
ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಅನೈತಿಕ ಗೂಂಡಾಗಿರಿ: ಕಠಿಣ ಕಾನೂನು ಕ್ರಮಕ್ಕೆ ಡಿವೈಎಫ್ ಐ ಒತ್ತಾಯ
ಕಡಬ: ಕಾನ್ ಸ್ಟೇಬಲ್ ನಿಂದ ಅತ್ಯಾಚಾರ ಪ್ರಕರಣ | ಇಂದು ನಡೆದ ಬೆಳವಣಿಗೆಗಳೇನು?
ಆರೆಸ್ಸೆಸ್ ನದ್ದು ತಾಲಿಬಾನ್ ಸಂಸ್ಕೃತಿ, ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ | ಸಿದ್ದರಾಮಯ್ಯ ವಾಗ್ದಾಳಿ
ಭಾರತೀಯರಿಗೆ ಶಾಕಿಂಗ್ ನ್ಯೂಸ್ | ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ
ಅಪೌಷ್ಟಿಕತೆ ನಿರ್ಮೂಲನೆ ಪೌಷ್ಟಿಕಾಂಶ ಮಾಸಾಚರಣೆ ಅಭಿಯಾನದ ಮುಖ್ಯ ಗುರಿ | ಲಾಲಸಾಬ್ ಪೀರಾಪುರ