ಮೋದಿ ಸರ್ಕಾರ ಕಾರ್ಮಿಕ, ರೈತ ಕಾನೂನುಗಳನ್ನು ದುರ್ಬಲಗೊಳಿಸುತ್ತಿದೆ | CPIM ಮುಖಂಡ ವಸಂತ ಆಚಾರಿ - Mahanayaka
3:00 PM Thursday 16 - October 2025

ಮೋದಿ ಸರ್ಕಾರ ಕಾರ್ಮಿಕ, ರೈತ ಕಾನೂನುಗಳನ್ನು ದುರ್ಬಲಗೊಳಿಸುತ್ತಿದೆ | CPIM ಮುಖಂಡ ವಸಂತ ಆಚಾರಿ

cpim
10/10/2021

ಗುರುಪುರ: ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್‌ವಾದಿ CPI(M) ನ 4ನೇ ಗುರುಪುರ ವಲಯ ಸಮ್ಮೇಳನವು ಇಂದು ಭಾನುವಾರ  ಇರುವೈಲು ಕನಡ್ರಕೋಡಿಯಲ್ಲಿ ನಡೆಯಿತು. ಪಕ್ಷದ ಹಿರಿಯ ಮುಖಂಡರಾದ ಹೊನ್ನಯ್ಯ ಅಮೀನ್ ಧ್ವಜಾರೋಹಣ ನೆರವೇರಿಸಿದರು.


Provided by

ಸಮ್ಮೇಳನವನ್ನು ಉದ್ಘಾಟಿಸಿ CPIM ಪಕ್ಷದ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್‌ವಾದಿಯು ಪ್ರಜಾಸತ್ತಾತ್ಮಕ ನೆಲೆಗಟ್ಟಿನಲ್ಲಿರುವ ಪಕ್ಷವಾಗಿದೆ. ಪ್ರಸ್ತುತ ಅಪಾಯದ ಅಂಚಿನಲ್ಲಿರುವ ಪ್ರಜಾಪ್ರಭುತ್ವವನ್ನು ಕಾಪಾಡಲು ನಾವು ಕಟಿಬದ್ದರಾಗಬೇಕಿದೆ. ಪ್ರಸ್ತುತ ಮೋದಿ ಸರ್ಕಾರ ಬಂದ ನಂತರದಲ್ಲಿ ಕಾರ್ಮಿಕ,ರೈತ ಕಾನೂನುಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಶಾಸಕಾಂಗವು ನ್ಯಾಯಾಂಗದಿಂದ ಪ್ರಬಲಗೊಳ್ಳುತ್ತಿದೆ. ಜನತೆಯ ಸಮಸ್ಯೆಗಳ ರೈತರ ಪ್ರತಿಭಟನೆಗಳ ಮತ್ತು ಸಂವಿಧಾನ ಬದ್ಧವಾಗಿ ಸಂವಿಧಾನದ ಮೂಲ ಧ್ಯೇಯದ ಪರ ನಿಲ್ಲಬೇಕಾದ ನ್ಯಾಯಾಲಯಗಳು ಭ್ರಷ್ಟ ರಾಜಕಾರಣಿಗಳ ಪರ ನಿಂತಿರುವಂತೆ ತೋರುತ್ತಿರುವುದು ಭಾರತೀಯ ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.

ಸಮ್ಮೇಳನದಲ್ಲಿ CPIM ಪಕ್ಷದ ದಕ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯು.ಬಿ.ಲೋಕಯ್ಯ ಗುರುಪುರ ವಲಯ ಕಾರ್ಯದರ್ಶಿ ಸದಾಶಿವದಾಸ್, ನೋಣಯ್ಯಗೌಡ, ಅಶೋಕ್ ಬಂಗೇರ, ವಸಂತಿ ಕುಪ್ಪೆಪದವು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಐವರು ಸಾವು | ಇಬ್ಬರು ಮಕ್ಕಳ ಸ್ಥಿತಿ ಗಂಭೀರ

ತುಮಕೂರು: ಚಿತ್ರಕಲಾ ಮಹಾವಿದ್ಯಾಲಯಕ್ಕೆ ಸ್ವಂತ ನಿವೇಶನ ಮಂಜೂರು ಮಾಡಲು ಸರ್ಕಾರಕ್ಕೆ ಮನವಿ

ವಿಚಿತ್ರ ಫೋಟೋ ಹಂಚಿಕೊಂಡು ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಮೋಹಕ ತಾರೆ ರಮ್ಯಾ!

ಪೊಲೀಸರು ನನ್ನ ಬೆನ್ನು ಮುರಿಯುವಂತೆ ಹೊಡೆದಿದ್ದರು | ಹಳೆಯ ನೆನಪು ಹಂಚಿಕೊಂಡ ಗೃಹ ಸಚಿವರು

ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ನಲ್ಲಿ ಕರೆದೊಯ್ದು ಯುವಕನ ಮೇಲೆ ಅತ್ಯಾಚಾರ!

ಮನೆಯ ಒಳಗೆ ನುಗ್ಗಿ ಮಗುವನ್ನು ಹೊತ್ತೊಯ್ಯಲು ಯತ್ನಿಸಿದ ಚಿರತೆ | ಆತಂಕದಲ್ಲಿ ಗ್ರಾಮಸ್ಥರು

ಬಂಟ್ವಾಳ: ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರು ಆರೋಪಿಗಳ ಅರೆಸ್ಟ್

26 ಬ್ರಾಹ್ಮಣೇತರ ಅರ್ಚಕರ ನೇಮಕ: ತಮಿಳುನಾಡು ಸರ್ಕಾರದ ಐತಿಹಾಸಿಕ ಹೆಜ್ಜೆ

ಇತ್ತೀಚಿನ ಸುದ್ದಿ