ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಉದ್ಘಾಟನೆ ವೇಳೆ ಕಾಂಗ್ರೆಸ್–ಬಿಜೆಪಿ ಮಧ್ಯೆ ಕ್ರೆಡಿಟ್ ವಾರ್!

ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯ ಹೊರರೋಗಿ ವಿಭಾಗದ ಕಟ್ಟಡ ಉದ್ಘಾಟನೆ ವೇಳೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಘೋಷಣೆಗಳ ಕಲರವ ಕೇಳಿ ಬಂತು. ಒಂದೆಡೆ ಸಿ.ಟಿ.ರವಿಗೆ ಜೈ… ಮತ್ತೊಂದೆಡೆ ಜಾರ್ಜ್ ಗೆ ಜೈ, ಮಗದೊಡೆ ತಮ್ಮಯ್ಯನಿಗೆ ಜೈ… ಎಂಬ ಘೋಷಣೆ ಕೇಳಿ ಬಂತು.
ಟೇಪ್ ಕಟ್ ಮಾಡುವಾಗ ಮೂವರು ನಾಯಕರ ಬೆಂಬಲಿಗರು ಘೋಷಣೆ ಕೂಗಿದರು. ಒಬ್ಬರಿಗೆ ಸೆಡ್ಡು ಹೊಡೆಯುವಂತೆ ಮತ್ತೊಬ್ಬರಿಂದ ಘೋಷಣೆ ಕೂಗಲಾತು ಆದ್ರೆ, ನೆರದಿದ್ದವರಿಗೆ ಯಾರೂ, ಯಾರ ಪರ ಕುಗ್ತಿದ್ದಾರೆಂಬುದೇ ತಿಳಿಯಲಿಲ್ಲ.
ಕಾಫಿನಾಡಲ್ಲಿ ಜಿಲ್ಲಾಸ್ಪತ್ರೆ ಕಟ್ಟಡ ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್–ಬಿಜೆಪಿ ಮಧ್ಯೆ ಕ್ರೆಡಿಟ್ ವಾರ್ ನಡೆದಿದೆ. ಸಿ.ಟಿ.ರವಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಕಾರ್ಯಕರ್ತರು ಹೊತ್ತು ಕುಣಿದರು. ಸಚಿವ ಜಾರ್ಜ್, ಶಾಸಕ ತಮ್ಮಯ್ಯ ಎದುರೇ ಸಿ.ಟಿ.ರವಿ ಹೊತ್ತು ಬಿಜೆಪಿ ಕಾರ್ಯಕರ್ತರು ಡ್ಯಾನ್ಸ್ ಮಾಡಿದರು.
ಕಾರ್ಯಕ್ರಮ ಮುಗಿಯುವ ಮುನ್ನವೇ ಬಿಜೆಪಿ ಕಾರ್ಯಕರ್ತರು ಘೋಷಣೆ ಘೋಷಣೆ ಕೂಗಿದರು. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಜಿಲ್ಲಾಸ್ಪತ್ರೆ ಹೊರರೋಗಿ ವಿಭಾಗದ ಕಟ್ಟಡ, ಇಂದು ಹೊರರೋಗಿ ವಿಭಾಗ ಉದ್ಘಾಟಿಸಿದ ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸಿದ್ದರು. ಈ ಹಿನ್ನೆಲೆಯಲ್ಲಿ ಎರಡು ಪಕ್ಷಗಳ ನಡುವೆ ಕ್ರೆಡಿಟ್ ವಿಚಾರವಾಗಿ ಘೋಷಣೆ, ಹೈಡ್ರಾಮವೇ ನಡೆಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: